ಡಿ.ವಿ.ಜಿ
ಮಂಕ ಮರುಳರ ನೆನೆದು, ಕಗ್ಗ ಕಾವ್ಯವ ಬರೆದು,
ಜೀವ ಸೂತ್ರವ ಹೆಣೆದು, ಭಾವ ಜೋಗವ ಸುರಿದು,
ಮನಸು ಮನಸಿಗೆ ಸೊಗಸು,
ಶಾಂತಿ ಧರ್ಮದ ಬೆಳಕು!
ಹೃದಯ ಹೃದಯಕೆ ಸೊಗಸು, ಸ್ನೇಹ, ಪ್ರೀತಿಯ ಹೊಳಪು!
ಧಾರೆ ಎರೆದವರಿವರೆ,
ಇಳೆಗೆ ಇಳಿಸಿದವರಿವರೆ!
ಯುಗಯುಗದ ಧರ್ಮ, ಮನುಕುಲದ ಧರ್ಮ, ಜೀವಜೀವನ ಧರ್ಮ, ಯೋಗ ಯೋಗಿಯ ಧರ್ಮ
ಅದರಲ್ಲಿನ ಮರ್ಮ, ಅದರಾಚೆಯ ಮರ್ಮ ಅದರೊಡನೆಯ ಕರ್ಮ, ಅದರೊಡನೆಯ ವರ್ಮ,
ನಿಜ ಸಾರಿದವರಿವರೆ!
ನಿಜ ತೋರಿದವರಿವರೆ!
ಗಾನ ವಾಚನ ಧ್ಯಾನ, ಕಗ್ಗದೊಳದನಿ ಅರಳಿ
ನಾಡ ದಿನಮಣಿ ನೀವು, ನಾಡ ಕಣ್ಮಣಿ ನೀವು
ಕಾವ್ಯದಮೃತ ನಿಮದು, ಸತ್ಯ ದರ್ಶನ ನಮಗೆ
ದಿವ್ಯ ಆತಪ ನಿಮದು, ಜ್ಞಾನ ದೀವಿಗೆ ನಮಗೆ
ಯುಗಕೊಬ್ಬರಿವರೆ!
ಡಿ.ವಿ.ಗುಂಡಪ್ಪನವರೆ!
ರಚನೆ - "ಸಂತ" (ಸಗು. ಸಂತೋಷ್)
ತಾರೀಖು - ೧೭/೦೩/೧೮
ಪ್ರೇರಣೆ: ಡಿ.ವಿ.ಜಿ ಅವರ ಜನುಮದಿನದ ಸಂಭ್ರಮದ ವಾತಾವರಣದಲ್ಲಿ ಮೂಡಿಬಂದ ಕವಿತೆ

No comments:
Post a Comment