Saturday, December 14, 2019

ಕವಿತೆ: ಮುಂಗಾರು ಮಳೆ

ಜೀವನದಲ್ಲಿನ ಬಹು ದೊಡ್ಡ ಕನಸು ನನಸಾದಾಗ ಮನಸು ಸಂಭ್ರಮಿಸುವುದರ ಚಿತ್ರಣ!


                              ಮುಂಗಾರು ಮಳೆ!


ಕಾರ್ಮೋಡವೆಲ್ಲ ಮುಂಗಾರು ಆದಮೇಲೆ! 
ಹುಣ್ಣಿಮೆ ಚಂದ್ರ ತೋರಿ ತಂಬೆಳಕು ಸುರಿದಮೇಲೆ!
ಭೂಗರ್ಭ ನೆನೆದು ಹೊಸಚಿಗುರು ಮೂಡಿತೀಗ! ಜೀವಾತ್ಮ ಹೊಳೆದು ಹೊಂಗನಸು ತೆರೆಯಿತೀಗ!

ವಿವಾದ ತರುವ ಮುನಿಸು, ಮುಗಿದು, ವಿನೋದ ಕೊಡುವ ಸೊಗಸು!
ವಿಲಾಪ ಸುರಿವ ನೆನಪು, ಕಳಚಿ, ಉಲ್ಲಾಸ ತುಂಬೊ ನನಸು!
ಊಯ್ಯಾಲೆಯಲ್ಲಿ ಕುಳಿತಿರುವೆ, ಈಗ ಉದ್ವೇಗವೆಲ್ಲ ಮೆಟ್ಟಿರುವೆ
ಊತ್ಸಾಹದಿಂದ ಗೆದ್ದಿರುವೆ, ಈಗ ಉನ್ಮಾದದಲ್ಲೆ ತೇಲಿರುವೆ!

ಬಡತನ ನೀಡೊ ಗೋಳು, ಕರಗಿ, ಸಿರಿತನ ಪಡೆವ ಬಾಳು!
ಹಗೆತನ ಸಿಡಿಸೊ ಬಡವು, ಕಳೆದು, ಗೆಳೆತನ ಸ್ಫುರಿಸೊ ಗೆಲವು!
ಬೆಂಗಾಡಿನಲ್ಲಿ ಅರಳಿರುವೆ! ಈಗ ಹೂಮಾಲೆಯಲ್ಲಿ ನಗುತಿರುವೆ!
ತಂಗಾಳಿಯಲ್ಲಿ ತೂಗಿರುವೆ ಈಗ ಶ್ರೀಗಂಧವಾಗಿ ತೇಲಿರುವೆ!

ಸಂಭ್ರಮ ಇರದ ಕೊರಳು , ಉಲಿದು, ಸರಿಗಮ ಪದನಿ ಒಡಲು!
ಸಲ್ಲಾಪ ಮರೆತ ಮನಸು, ಕುಣಿದು, ಸಂಗೀತ ಮೆರೆದ ಸೊಗಸು!
ಏಕಾಂತದಿಂದ ಸರಿದಿರುವೆ! ಈಗ ಸಂವೇಶದಲ್ಲಿ ಜಯಿಸಿರುವೆ
ಸಂಸೃತಿಯ ತಂತಿ ಮೀಟಿರುವೆ! ಈಗ ಸಂತೊಷದಲ್ಲಿ ತೇಲಿರುವೆ!


ರಚನೆ - "ಸಂತ" (ಸ.ಗು.ಸಂತೋಷ್)
ತಾರೀಖು - ೦೬/೧೦/೧೫

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...