Saturday, December 14, 2019

ಕವಿತೆ: ಮಳೆ! ಮಳೆ!

ಮಳೆ! ಮಳೆ!


ಮಳೆ! ಮಳೆ! ಮಳೆ! ಮಳೆ!
ಮಳೆ! ಮಳೆ! ಮಳೆ! ಮಳೆ!
ಮುಗಿಲ ಮೇಘ ಜಾರಿ ಇಳೆಗೆ
ಶೃತಿಯ ಹಿಡಿದು ರಾಗ ಲಯದಿ
ಮುತ್ತಿನ ಮಳೆ, ಹನಿ ಇಬ್ಬನಿ ಮಳೆ!
ಮಳೆ! ಮಳೆ! ಮಳೆ! ಮಳೆ!
ಮಳೆ! ಮಳೆ! ಮಳೆ! ಮಳೆ!
ಮೆಲ್ಲ ಮೆಲ್ಲ ಇಳಿಯೆ ಮಿಂದು
ಬೊಗಸೆ ಹಿಡಿದು ಮೋದ ಮುದದಿ
ಚೆಲುವಿನ ಮಳೆ, ರತಿ ರಾಗಿಣಿ ಮಳೆ!
ಜಗವ ತೋಯ್ದು ವಿಮಲಗೊಳಿಸಿ,
ಕುಸುಮ ಎದೆಗೆ ಜೇನ ಹನಿಸಿ
ಬಣ್ಣ ಬಣ್ಣ ಲೋಕ ಸೃಜಿಸಿ,
ರಾಗ ಬಂಧ ಬಯಕೆ ಬೆಳೆಸಿ
ಕವನ ಕಾವ್ಯ ಹೊಸತು ಹರಿಸಿ,
ಭವ್ಯ ಸೊಗಸು ಸೊಬಗು ಕುಣಿಸಿ
ಮಾಯೆ ಎಲ್ಲೆ ಮೀರಿತೆನಿಸಿ,
ನೆನೆಸಿ, ನಲಿಸಿ, ರಮಿಸಿ, ತಣಿಸಿ!
ಮಳೆ! ಮಳೆ! ಮಳೆ! ಮಳೆ!
ಮಳೆ! ಮಳೆ! ಮಳೆ! ಮಳೆ!
ಜತನ ಕೂಡಿ ಬುವಿಗೆ ಜಾರೆ,
ಸೀರೆ ನೀರೆ ಸರಸ ಧಾರೆ!
ಹೆರಳು, ಕುರುಳು ತೂಗುವಾಟ,
ನೋಟದಂಚು, ಮಿಂಚು ಮಾಟ!
ಬಿಂದು, ’ಬಿಂದು’ ಮಾಯ ಸಿಂಧು!
ಸ್ವಾತಿ ಮುತ್ತು! ನವ್ಯ ಮತ್ತು!
ಯುಗಳ ವರ್ಷ, ಹರ್ಷ ಧುಮುಕಿ
ಭ್ರಮಿಸಿ, ಮಣಿಸಿ, ಮೆರೆಸಿ, ಸುಖಿಸಿ
ಮಳೆ! ಮಳೆ! ಮಳೆ! ಮಳೆ!
ಮಳೆ! ಮಳೆ! ಮಳೆ! ಮಳೆ!
ರಚನೆ - ಸ.ಗು. ಸಂತೋಷ್
ತಾರೀಖು - ೩೧/೦೭/೨೦೧೫

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...