Saturday, January 4, 2025

ಕವಿತೆ: ಲಕ್ಷ್ಯ - ನಿರ್ಲಕ್ಷ್ಯ

 ಲಕ್ಷ್ಯ - ನಿರ್ಲಕ್ಷ್ಯ


ಲಕ್ಷ್ಯದ ಬೆನ್ನೇರಿ ಬಂತೆ ನಿರ್ಲಕ್ಷ್ಯದ ಬೆನ್ನುರಿ!!

ಲಕ್ಷ್ಯದ ನೆರಳಾಗಿ ಬಂತೆ ನಿರ್ಲಕ್ಷ್ಯದ ದಳ್ಳುರಿ!! 

ಸಾರ್ಥಕತೆಯ ಅರಸಿ ಹೊರಟು ಸ್ವಾರ್ಥವೇ ಸಾರ್ಥವಾಯ್ತೆ?

ನಿರ್ಲಕ್ಷ್ಯಕೆ ಲಕ್ಷ್ಯ ಕೊಡದೆ

ಅರ್ಥವೇ ಅನರ್ಥವಾಯ್ತೆ? 


ಕನಸು ಬಿತ್ತಿ ಲಕ್ಷ್ಯವಿಟ್ಟು,

ಸವೆಸಿ ನಡೆದ ಹಾದಿಯಲ್ಲಿ

ಕಳೆದ, ಸಮೆದ ಜೀವ, ಭಾವ

ಆಟಕುಂಟು ಲೆಕ್ಕಕಿಲ್ಲ ಇದುವೆ ರೀತಿಯೆ?

ಪೊರೆದ, ಮೆರೆದ, ಪ್ರೀತಿ, ಸ್ನೇಹ 

ನಫೆಗೆ ಮಾತ್ರ, ನಷ್ಟಕಿಲ್ಲ ಇದುವೆ ನೀತಿಯೆ?!


ಮೂರು ಕಾಲ ಲಕ್ಷ್ಯಕೆನುತ

ದೇಹ ದುಡಿಸಿ, ದಣಿಸಿ, ದಹಿಸಿ 

ಅಪಥ್ಯವೆ ಪಥ್ಯವಾಗೊ ಇದುವೆ ಸೂತ್ರವೆ?

ಬಿಡದೆ ನಿತ್ಯ ಲಕ್ಷ್ಯವೆನುತ

ಬೇರು ಬಿಡಿಸಿ, ಬೇರೆ ಎನಿಸಿ

ಅಸತ್ಯವೆ ಸತ್ಯವಾಗೊ ಇದುವೆ ಮಾರ್ಗವೆ?


ರಚನೆ: "ಸಂತ"(ಸ.ಗು ಸಂತೋಷ್)

ತಾರೀಖು: ೩೧/೦೫/೨೦೨೪


ಪ್ರೇರಣೆ: ಇಂದು ಗೆಳೆಯ ರಾಘವೇಂದ್ರನ ಹುಟ್ಟು ಹಬ್ಬ. ಅವನು ನಿರ್ಲಕ್ಷ್ಯದ ಬಗ್ಗೆ ಲಕ್ಷ್ಯವಹಿಸುವಂತೆ ತಿಳಿಸಿ ಹುರಿದುಂಬಿಸಿದ... ನಾನು ಮೊದಲಿಗೆ ಕೇವಲ 'ಲಕ್ಷ್ಯ'ದ ಕಡೆ ಲಕ್ಷ್ಯವಿಟ್ಟೆ ಆಮೇಲೆ ತಾನಾಗಿ ಲಕ್ಷ್ಯ, ನಿರ್ಲಕ್ಷ್ಯಗಳು ಒಂದಾಗಿ ಈ ರೂಪ ತಳೆದವು. ಹುಟ್ಟುಹಬ್ಬಕೆ ಗೆಳೆಯನಿಗೆ ಈ ನನ್ನ "ಲಕ್ಷ್ಯ", " ನಿರ್ಲಕ್ಷ್ಯ-ಲಕ್ಷ್ಯ" ಕವನಗಳನ್ನು ಉಡುಗೊರೆಯಾಗಿ ಅರ್ಪಿಸುತ್ತಿದ್ದೇನೆ.

ಸದಾಕಾಲ ಆತ್ಮಾನಂದದ ರಸಾನುಭೂತಿಯಲ್ಲಿ ಮಿಂದು ಚೆನ್ನಾಗಿರು ಮಿತ್ರ🙏

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...