Saturday, January 4, 2025

ಕವಿತೆ: ಲಕ್ಷ್ಯ

 ಲಕ್ಷ್ಯ


ಬೇಕು ಬೇಕು ಬೇಕು ಇರಲೆ ಬೇಕು ("ಲಕ್ಷ್ಯ")

ಬೇಕು ಬೇಕು ಬೇಕು ಇರಲೆ ಬೇಕು ("ಲಕ್ಷ್ಯ")

ಬಾಳಿನಲಿ ಎಲ್ಲರಿಗೂ ಬೇಕೆ ಬೇಕು ("ಲಕ್ಷ್ಯ")

ಜೀವನಕ್ಕೆ ಅರ್ಥ ಕೊಡಲು ಬೇಕೆ ಬೇಕು ("ಲಕ್ಷ್ಯ")


ಲಕ್ಷ್ಯ! ಲಕ್ಷ್ಯ! ಲಕ್ಷ್ಯ! 

ಲಕ್ಷ್ಯ! ಲಕ್ಷ್ಯ! ಲಕ್ಷ್ಯ!


ಭೂಮಿಯಲ್ಲಿ ಬಂದ ಮೇಲೆ ಇರಲೆ ಬೇಕು ("ಲಕ್ಷ್ಯ")

ಭೂಮಿಯನ್ನು ತೊರೆವವರಗೆ ಇರಲೆ ಬೇಕು ("ಲಕ್ಷ್ಯ")

ಸಂಗ ಜೀವಿ ಎಂದ ಮೇಲೆ ಇರಲೆ ಬೇಕು ("ಲಕ್ಷ್ಯ")

'ಬುದ್ಧಿ' ಜೀವಿ ಎಂದ ಮೇಲೆ ಇರಲೆ ಬೇಕು ("ಲಕ್ಷ್ಯ")    

||೧||


ಲಕ್ಷ್ಯ! ಲಕ್ಷ್ಯ! ಲಕ್ಷ್ಯ! 

ಲಕ್ಷ್ಯ! ಲಕ್ಷ್ಯ! ಲಕ್ಷ್ಯ! 


ಪ್ರೀತಿ, ಸ್ನೇಹ ಏನೆ ಇರಲಿ ಬೇಕೆ ಬೇಕು ("ಲಕ್ಷ್ಯ")

ಯೋಗಿ, ಭೋಗಿ ಯಾರೆ ಇರಲಿ ಬೇಕೆ ಬೇಕು ("ಲಕ್ಷ್ಯ")

ಕರ್ಮ ಇರಲಿ, ಧರ್ಮ ಇರಲಿ ಬೇಕೆ ಬೇಕು ("ಲಕ್ಷ್ಯ")

ಶಾಂತಿ ಇರಲಿ, ಕ್ರಾಂತಿ ಇರಲಿ

ಬೇಕೆ ಬೇಕು ("ಲಕ್ಷ್ಯ")

||೨||


ಲಕ್ಷ್ಯ! ಲಕ್ಷ್ಯ! ಲಕ್ಷ್ಯ! 

ಲಕ್ಷ್ಯ! ಲಕ್ಷ್ಯ! ಲಕ್ಷ್ಯ!


ರಚನೆ: "ಸಂತ"(ಸ.ಗು ಸಂತೋಷ್)

ತಾರೀಖು: ೩೧/೦೫/೨೦೨೪


ಪ್ರೇರಣೆ: ಗೆಳೆಯ ರಾಘವೇಂದ್ರನು ನಿರ್ಲಕ್ಷದ ಬಗ್ಗೆ ಲಕ್ಷ್ಯವಿರಿಸಿ ಕವನ ಬರೆಯುವೆಯ ಎಂದಾಗ ನನ್ನ ಲಕ್ಷ್ಯ ಮೊದಲಿಗೆ 'ಲಕ್ಷ್ಯ'ದ ಕಡೆಗೆ ವಾಲಿತು. ಲಕ್ಷ್ಯವಿರದ ಬದುಕು, ಸೂತ್ರವಿರದ ಗಾಳಿಪಟದಂತೆ...ಹಾಗಾಗಿ ಮೊದಲು 'ಲಕ್ಷ್ಯ'ದ ಕಡೆ ಗಮನ ನೀಡೋಣ ತದನಂತರ ನಿರ್ಲಕ್ಷ್ಯವು ಅದರ ಬೆನ್ನಲ್ಲೇ ಮೂಡುವುದು ಎಂದು ಇದನ್ನು ರಚಿಸಿದೆ!

ಇಂದು ಗೆಳೆಯನ ಹುಟ್ಟುಹಬ್ಬ, ಅವನೊಂದಿನ ಅನೇಕ ಸವಿನೆನಪುಗಳು ಈ ರಚನೆಯ ವೇಳೆ ಹಸಿರಾದವು. ಈ ಕವನ ಅವನಿಗಾಗಿ. ಸದಾ ಆನಂದವಾಗಿರು ಮಿತ್ರ🙏

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...