Saturday, April 28, 2018

ಕವಿತೆ: ರಸಕವಳ

                  "ರಸಕವಳ"

ಶುಭನುಡಿದು ಮನಸಿನ ಹಕ್ಕಿ, ನಾ ಧನ್ಯ ಎನ್ನುತಿದೆ 
ಸಂತೋಷ ಹೃದಯವ ತುಂಬಿ, ತನು ಬಾಗಿ ನಮಿಸುತಿದೆ 

ಭುವನೇಶ್ವರಿಯ ಮಂಗಳ ರೂಪ, ನಾಡಿನಾಚೆಗೂ ಮೆರೆಯುತಿರೆ  
ಹರ್ಷೋದ್ಗಾರ, ವಿಜಯೋತ್ಸಾಹ, ನಾಡು ನುಡಿಗೆನೆ ಚಿಮ್ಮುತಿದೆ 
"ಉತ್ತರಕಾಂಡ"ದ ಈ ರಾಮಾಯಣದಿ "ಸುಂದರಕಾಂಡ"ವ ಚಿತ್ರಿಸಿದೆ 
ಜನ್ಮ ಜನ್ಮಾಂತರದ "ಶ್ರೇಯ"ದ ಬಿಕ್ಕೆ! "ನಿತ್ಯ"ರಸಕವಳ ಘಮಿಸುತಿದೆ!

ಭಾವ ದೀಪ್ತಿಗೆ ದಿವ್ಯ "ರೋಹಿತ"! "ದಿಲೀಪ" "ಕಿರಣ"  ಬೆಳಗುತಿದೆ 
"ಪಂಕಜ" ಅರಳಿ, "ಗಿರಿ"ಝರಿ ಹೊರಳಿ ರಮ್ಯ ಕಾನನ ಕಾಡುತಿದೆ 
"ಪ್ರಿಯಾಂಕ" ಸುಧೆಯ ಸನ್ನುತ ಜತ್ತು! ನೆನಪಿನಂಗಳಕೆ ಒಯ್ಯುತ್ತಿದೆ 
ಹಿಮ ಬನದಲ್ಲಿ ಸುಮ ಘಮ ಚೆಲ್ಲಿ, ಚಿನ್ಮಯಾನಂದ ಬಳಸುತಿದೆ! 

ಮೈತ್ರಿ ಮಲ್ಲಿಗೆಯ ಚೆಲುವಾ"ತ್ರೇಯ"! "ಮೋಹನ" ಮುರಳಿ ನುಡಿಸುತಿದೆ 
"ಶ್ರುತಿ" ಲಯ "ಆಶ್ರಿತ"  ಮಂಜುಳ ಗಾನ, ಹೃನ್ಮನ ತಣಿಸಿ ನಲಿಸುತಿದೆ 
ತನ್ಮಯನಾಗಿಸಿ, "ವಿನಯೋ"ನ್ಮಾದ! "ಜಯ ಶ್ರೀ" "ಗುರು"ವಿಗೆ ವಂದಿಸಿದೆ 
ವಿಸ್ಮಿತ, ಸುಸ್ಮಿತ, ಬ್ರಹ್ಮ ವಿರಚಿತ ಸೃಷ್ಟಿ ಸೊಬಗನು ಮೆಚ್ಚುತಿದೆ!

ರಚನೆ - "ಸಂತ"(ಸ ಗು ಸಂತೋಷ)
ತಾರೀಖು - ೨೨/೦೧/೨೦೧೭

ಪ್ರೇರಣೆ: ಜರ್ಮನಿಯ ಪ್ರವಾಸದ ಸಂದರ್ಭದಲ್ಲಿ ರಸಕವಳವನ್ನು ಉಣಬಡಿಸಿದ ಎಲ್ಲ ಮಿತ್ರವೃಂದಕ್ಕೆ ಮಿಗಿಲಾಗಿ ಅವರ ಕುಟಂಬಕ್ಕೆ ಅನಂತ ವಂದನೆಯನ್ನು ಅರ್ಪಿಸುತ ಮೂಡಿದ ಕವಿತೆ

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...