Sunday, January 20, 2019

ನಾವು‌ ಕೃಷ್ಣಾರ್ಜುನರು

ನಾವು ಕೃಷ್ಣಾರ್ಜುನರು!!

ವಿಜಯನಗರ ಅಪ್ರಮೇಯ, ವಿಜಯಪರ್ವ ಕರ್ಮವೀರ , ನಿನಗೆ ನಾ ಕೃಷ್ಣನೆ?
ಇದು ಉತ್ಕೃಷ್ಟ ಗುರು ಭಕ್ತಿ! ವಿದ್ಯಾರಣ್ಯ ಗುರು ಶಕ್ತಿ!  ನನಗೆ ನೀ ಪಾರ್ಥನೆ!?

ಅರ್ಧ ದಶಕದ ಒಡನಾಟ, ಕಂಡಿತೆಷ್ಟೋ ಆಟ, ಹೋರಾಟ!
ಕೂಡಿ ನಿಂತರೆ ನಾವು ಖಚಿತ, ನಿಶ್ಚಿತ, ಎಲ್ಲೆಡೆ ಜಯಭೇರಿ!
ನಾಳೆಗಿದು ಇತಿಹಾಸ!! ಮೂಡಲಿದೆ ಹೊಸತೊಂದು ಅಧ್ಯಾಯ
ನಿನ್ನದೇ ಸಾರಥ್ಯ , ಕೌತುಕ, ಸ್ವಾರಸ್ಯ! ಹೊಸಹಗಲು ತೋರುತಿದೆ!

ಎನ್ನೆದೆಯ ಬಾಚಿ ತಬ್ಬಿದೆ ಇಂದು, ಗೆಲವು, ನಲವಿನಲೆಗಳ ಪೂರ
ಗುರುವ ಮೀರಿಸಿ ನೀನು, ಆಗಿರಲು ಅಚ್ಚುಮೆಚ್ಚಿನ ಸರದಾರ
ಅನುಮಾನಕೆಡೆಯಿಲ್ಲ ನಿಜದಿ ನೀನೀಗ ಹೊಸತನದ ಹರಿಕಾರ!
ಎಲ್ಲರಿಂಗಿತ ತಿಳಿದು, ಬೇಡಿಕೆಯ ಅರಿತು, ಮುನ್ನಡೆಸೊ ಗುರಿಕಾರ!

ಅಪರಿಮಿತ ಆನಂದ, ಉನ್ಮಾದ, ಉಲ್ಲಾಸ, ಸದಾ ವಿಜಯ ಸಖ್ಯ
ಇತಿಹಾಸದಿ ಮೆರೆದ ಮರೆಯದ ಸಾಮ್ರಾಜ್ಯ, ಮರೆಯದ ಮಾಣಿಕ್ಯ
ಸನ್ಮಾನ, ಸತ್ಕಾರ, ಸಂತೋಷದುದ್ಗಾರ ಬೆಳಗಿದ ಚರಿತೆಯದು
ವಿಜಯದುತ್ತುಂಗ ಈಗ ಮುಂದಿಹುದು, ಗಟ್ಟಿ ನಂಬಿಕೆ ಇದು!

ರಚನೆ: ಸಂತ (ಸ.ಗು ಸಂತೋಷ್)
ತಾರೀಖು: ೩೧/೧೨/೨೦೧೮

ಪ್ರೇರಣೆ: ನನ್ನ ಆತ್ಮೀಯ ವಿಜಯ್ ನನ್ನನ್ನು ಬೀಳ್ಕುಡುವಾಗ ನಮ್ಮ ಐದು ವರ್ಷದ ಒಡನಾಟವನ್ನು ಕೃಷ್ಣಾರ್ಜುನರ ಸಂಬಂಧಕ್ಕೆ ಹೋಲಿಸಿ ಅದರ ಮೂರ್ತಿಯನ್ನು ನನಗೆ ಉಡುಗೊರೆಯಾಗಿ ಕೊಟ್ಟ ಅವಿಸ್ಮರಣೀಯ ಕ್ಷಣ.

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...