Saturday, December 14, 2019

ಕವಿತೆ: ಏಕೆ ಹೀಗಾದೆ

              ಏಕೆ ಹೀಗಾದೆ


ಎಲ್ಲ ಇದ್ದರೂ ಏಕೆ ಇಲ್ಲದುದ್ದರ ಕಡೆಗೆ
ನಿನ್ನ ಒಲವದು ಕಾಣೆ ಹೇಳು ಓ ಮನಸೆ!!

ಹಂಚಿಕೊಳ್ಳಲು ಪ್ರೀತಿ, ಸ್ನೇಹ ಸರಳತೆ ರೀತಿ
ಮೆಚ್ಚಿಕೊಳ್ಳುತ ಸುತ್ತಿ, ಜೀವ ಭಾವವ ಮುತ್ತಿ
ಮಲ್ಲೆ ಮೊಗ್ಗಿನ ಮನಸು, ಒಮ್ಮೆ ಬಾರದ ಮುನಿಸು,
ಇಂದೇಕೆ ಈ ಬಿರುಸು, ದೂರವಾಗಿದೆ ಸೊಗಸು!

ಹಾಲು-ಜೇನಿನ ಸವಿಯು, ಜೇನು ಗೂಡಿನ ಛವಿಯು
ಕಹಿಯಲ್ಲಿ ಸಿಹಿ ನೀಡಿ, ಇರುಳಲ್ಲಿ ಇನ ತೋರಿ
ವಿಮಲ ಮನಸಿನ ಸರಳೆ, ಅರಳೆ ಮನಸಿನ ತರಳೆ
ಬೇಕೇಕೆ ಈ ತೊಡಕು, ಸೊರಗುತಿದ್ದರೂ ಬದುಕು!

ಹೊಸತು ಜೀವದ ಕನಸು, ಹಳತು ಮಾಸದ ನೆನಪು
ಕೂಡಿ ನಿತ್ಯವು ಹಾಡಿ, "ಅರ್ಧಮಿಥ್ಯ"ವ ದೂಡಿ!
ಒಲವ ಸರಸದ ಮೊಗ್ಗೆ, ಹಿಗ್ಗಿ ಸೊಗಸಿನ ಬುಗ್ಗೆ
ಮತ್ತೇಕೆ ಈ ಮ್ಲಾನ, ಇರಲು ಪ್ರಣಯದ ಯಾನ!


ರಚನೆ-ಸ.ಗು.ಸಂತೋಷ್
ತಾರೀಖು - ೩೧/೦೭/೨೦೧೪

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...