Saturday, April 4, 2020

ಕವಿತೆ: ಶಾರ್ವರಿ

                        ಶಾರ್ವರಿ

ಬಂದಿಹನು ಋತುಚೈತ್ರ, ನೋಡಲೆಲ್ಲೆಲ್ಲೂ ಹಸಿರುಡುಗೆ‌ ಹೂಬನ!!
ಶೃಂಗಾರ‌ ರಸಕಾವ್ಯ, ಸೃಷ್ಟಿಯೊಳೆಲ್ಲೆಲ್ಲೂ ಸಂತಸದ ದಿಬ್ಬಣ!!!

ಶಾರ್ವರಿಯು ಕೃಪೆತೋರೆ ಸುಕೃತದ ದರ್ಶನ!
'ವಿಕಾರಿ' ವೈರಾಣು, ತಮಸ್ಸು ಮರ್ದನ!
ಇಳೆಯಲ್ಲಿ ಮತ್ತೊಮ್ಮೆ ಗೆಲವೊಲವ ಚಂದನ!
ಹೊಸಬೆಳಕು, ಹೊಸಹುರುಪು ಉಲ್ಲಾಸ ನರ್ತನ!

ಮೂಡಣದ ನೇಸರನ ರಶ್ಮಿಯ ಸಿಂಚನ!
ಪಿಕಗಾನದಿನಿದನಿಗೆ ಹೃದಯದ ಸ್ಪಂದನ!
ಮನೆಮನೆಯ ಬಾಗಿಲಲಿ  ಹಸಿರಿನ ತೋರಣ!
ಮಾಂದಳಿರು, ಹೊಂಗೆಲರು ಬೇವಿನ ಚೇತನ!

ಹೊಸವರ್ಷ ಹರ್ಷದಲಿ ಹೋಳಿಗೆ ಹೂರಣ!
ಮನಹಿಗ್ಗಿ, ನಗೆ ಹಬ್ಬಿ ಕೂಜನ, ಖೇಲನ!!
ಪಂಚೇಂದ್ರಿಯಗಳಿಗೆ ಸವಿಸೊಗದ ಔತಣ!
ಹೊಂಗನಸು, ಹೊಂಬಾಳಿನಾಶಯದ  ತಾರಣ!

ರಚನೆ: "ಸಂತ" (ಸ.ಗು ಸಂತೋಷ)
ತಾರೀಖು: ೦೪/೦೪/೨೦

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...