Thursday, August 11, 2022

ಕವಿತೆ: ಅರುಣರಾಗ

   *ಅರುಣರಾಗ*  


ಮೂಡಣದ ಮರವಂತೆ, ಪಡುವಣದಿ ನೆನೆವಂತೆ

ತಿಳಿಮುಗಿಲ ಅಂಗಳವ ಸಿಂಗರಿಸಿ ಬೆಳಗಿನಲಿ 

ಮುಸ್ಸಂಜೆ ರಾಗರತಿ, ಸುಧೆಸೊಗದಿ ಮಿಂದಂತೆ 

ಮೂಡಿದನು ಉದಯರವಿ, ಪಶ್ಚಿಮದ ಕಡಲಿನಲಿ!  


ಅರಿಸಿನದ, ಕುಂಕುಮದ ಸೌಭಾಗ್ಯ ಬುವಿಗೆಂದು

ಚೆಲುವಿನಾರತಿ ಬೆಳಗಿ, ಹಸಿರುಡುಗೆ ತೊಡಿಸಿರಲು

ಸಿರಿಕಾಂತಿ ಮೈಬಳಸಿ, ಕನಕಾಂಗಿ ಕಂಗೊಳಿಸಿ

ನಸುನಾಚಿ ನೀರಾಗಿ, ಸೆರೆಯಾದ  ರಜನೀಶ!


ಉಷೆಯ ಪ್ರಭೆ ಮುಗಿಲಿನಲಿ, ಜೀವಸೆಲೆ ಕಡಲಿನಲಿ,

ರವಿಕಾಂತಿ, ತೆರೆ-ಪ್ರೀತಿ, ನಾವಿಕರ ನಡುವಿನಲಿ 

ಮೇಲೇರಿ, ಕೆಳಜಾರಿ ಸಂಚಾರಿ, ಬಾನಾಡಿ 

ತೂಗಿಹುದು, ತೇಲಿಹುದು ಮನದಣಿಯೆ ಜಗನೋಡಿ!   


ಪ್ರಕೃತಿಯ ರಸಲೀಲೆ, ವಿಸ್ಮಯದ ಸರಮಾಲೆ 

ಋತುಗೀತ, ರತಗೀತ, ಕಳಚುತ್ತ ಸಂಕೋಲೆ 

ನನಸಾಗೊ ಹಗಲಿನಲಿ ಹಗುರಾಗಿ ಕನಸುಗಳು! 

ಉದಯಿಸುತ ಕವಿಸಮಯ ಕಲ್ಪನೆಗೆ ಕವಲುಗಳು!  


ರಚನೆ: "ಸಂತ" (ಸ.ಗು ಸಂತೋಷ್) ತಾರೀಖು: ೩೦/೦೭/೨೦೨೨  


ಪ್ರೇರಣೆ: ಆತ್ಮೀಯ ಗುರುವಿನ ಸಿಸಿಲಿ ಪ್ರವಾಸದಲ್ಲಿ ಸೆರೆಸಿಕ್ಕ ಅರುಣರಾಗದ ದೃಶ್ಯ!!






*ಅರುಣರಾಗ*

ಮೂಡಣದ ಮರವಂತೆ, ಪಡುವಣದಿ ನೆನೆವಂತೆ

ತಿಳಿಮುಗಿಲ ಅಂಗಳವ ಸಿಂಗರಿಸಿ ಬೆಳಗಿನಲಿ 

ಮುಸ್ಸಂಜೆ ರಾಗರತಿ, ಸುಧೆಸೊಗದಿ ಮಿಂದಂತೆ 

ಮೂಡಿದನು ಉದಯರವಿ, ಪಶ್ಚಿಮದ ಕಡಲಿನಲಿ!  


ಅರಿಸಿನದ, ಕಂಕುಮದ ಸೌಭಾಗ್ಯ ಸಿರಿತಂದು 

ತನ್ನ ಪ್ರಿಯತಮೆಗೆ, ಅಭಿಸಾರಿಕೆ ಭೂರಮೆಗೆ,

ಸ್ಪರ್ಶಿಸುತ, ಮುದ್ದಿಸುತ ಚೆಲ್ಲುತೆ ಕನಕಾಂಬರ! 

ನಸುನಾಚಿ ನೀರಾಗಿ, ಸೆರೆಯಾದ ಮಧುಚಂದಿರ! 


ಉಷೆಯ ಪ್ರಭೆ ಮುಗಿಲಿನಲಿ, ಜೀವಸೆಲೆ ಕಡಲಿನಲಿ,

ರವಿಕಾಂತಿ, ತೆರೆ-ಪ್ರೀತಿ, ನಾವಿಕರ ನಡುವಿನಲಿ 

ಮೇಲೇರಿ, ಕೆಳಜಾರಿ ಸಂಚಾರಿ, ಬಾನಾಡಿ 

ತೂಗಿಹುದು, ತೇಲಿಹುದು ಮನದಣಿಯೆ ಜಗನೋಡಿ!   


ಪ್ರಕೃತಿಯ ರಸಲೀಲೆ, ವಿಸ್ಮಯದ ಸರಮಾಲೆ 

ಋತುಗೀತ, ರತಗೀತ, ಕಳಚುತ್ತ ಸಂಕೋಲೆ 

ನನಸಾಗೊ ಹಗಲಿನಲಿ ಹಗುರಾಗಿ ಕನಸುಗಳು! 

ಉದಯಿಸುತ ಕವಿಸಮಯ ಕಲ್ಪನೆಗೆ ಕವಲುಗಳು!  


ರಚನೆ: "ಸಂತ" (ಸ.ಗು ಸಂತೋಷ್) ತಾರೀಖು: ೩೦/೦೭/೨೦೨೨  


ಪ್ರೇರಣೆ: ಆತ್ಮೀಯ ಗುರುವಿನ ಸಿಸಿಲಿ ಪ್ರವಾಸದಲ್ಲಿ ಸೆರೆಸಿಕ್ಕ ಅರುಣರಾಗದ ದೃಶ್ಯ!!

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...