ಆತ್ಮೀಯರೆ,
ಕಳೆದ ಶನಿವಾರದಂದು ನಮ್ಮ ಗುರಿಕಾರ ಪೃಥ್ವಿ ಸೃಷ್ಟಿಸಿರುವ ಹದಿನೇಳೆಂಟು ಚಿತ್ರದ ದೆಸೆಯಿಂದ, ರವಿ ರೂಪ ದಂಪತಿಗಳ ದೆಸೆಯಿಂದ ಚಿತ್ರಬಳಗಕ್ಕೆ ಮತ್ತೆ ಕಲೆವ ಅವಕಾಶ ದೊರೆಯಿತು... ಕೊಣನೂರು ಪರಿವಾರದ ಪರಿಚಯವೂ ಆಯಿತು🙏
ಕಳೆದ ತಿಂಗಳು ನಮ್ಮ ಪ್ರಾಂಶುಪಾಲರ ಹುಟ್ಟು ಹಬ್ಬದ ಸಂಭ್ರಮಕೆ ಸೇರಿದ್ದ ನಾವುಗಳು ಮತ್ತೆ ಇಷ್ಟು ಬೇಗ ಸೇರುವ ಅವಕಾಶ ದೊರೆತದ್ದು ಬಹಳ ಖುಷಿ ನೀಡಿತು.
ನನ್ನನ್ನು ಮತ್ತೊಮ್ಮೆ ರವಿ-ರೂಪ ದಂಪತಿಗಳು ಮೂಕವಿಸ್ಮಿತಗೊಳಿಸಿದರು. ಕಾರ್ಯಕ್ರಮದ ಆಯೋಜನೆಯಲ್ಲಿನ ಅಚ್ಚುಕಟ್ಟು ತನವಿರಲಿ, ಬಳಗದೊಂದಿನ ಆಪ್ತ ಒಡನಾಟವಿರಲಿ, ಅವರಲ್ಲಿ ಸದಾ ತೋರುವ ಪಾದರಸದ ಚೇತನವಿರಲಿ ಸ್ಪೂರ್ತಿಯ ಸೆಲೆಯಾಗಿ ಕಾಡುತ್ತದೆ... ಅದೇ ನನ್ನನ್ನು ಕವಿಯಾಗಿ ಕೆಲವು ಸಾಲುಗಳ ಬರೆವಂತೆ ಪ್ರೇರೇಪಿಸಿದೆ.
"ರವಿ ರೂಪ" (ಭಾಗ-೨)
"ರವಿ ರೂಪ" ದೆಸೆಯಿಂದ ಮೈತ್ರಿಕೂಟದ ಚೆಲುವು!
ನೆನೆದಷ್ಟು, ನುಡಿದಷ್ಟು ಮನ ಹಗುರ, ಗೆಲುವು
ಅನವರತ ಅಕ್ಷಯದ ಚೈತನ್ಯ ದ್ವಯ ಮೂರ್ತಿ!
ಇವರಿಗಿವರೇ ಸರಿಸಾಟಿ, ಆಸ್ಖಲಿತ ಕೀರ್ತಿ!
ಅತಿವಿರಳ ಕಾಣುವುದು ನಿಜ ಮಧುರ ಮೈತ್ರಿ!
ಸುಕೃತವೆ ಇದು ನಮಗೆ, ಈ ಸ್ನೇಹ ಧಾತ್ರಿ!
ಸಜ್ಜನಿಕೆ, ಸರಳತೆಗೆ ಅನ್ವರ್ಥ ಇವರು
"ವಿದ್ಯಾರ್ಥಿ ಭವನ"ಕ್ಕೆ ಅನುರೂಪರಿವರು!
ಆಂತರ್ಯ ತಿಳಿದೆವೆನೆ ಸ್ನೇಹದ ಕಡಲು!
ಆಪ್ತೇಷ್ಟ ಬಳಗವೆನೆ ತಾರೆಗಳ ಮುಗಿಲು!
ಆವ ಪುಣ್ಯದ ಫಲವೊ ಈ ಹದಿನೇಳೆಂಟು!
ನೀಡಿಹುದು ಇಂಥಹ ಆತ್ಮೀಯ ನಂಟು
ಬೆಳೆಯುತ್ತ, ಬಾಳುತ್ತ ಬಿಗಿದಿರಲಿ ತಂತು
ನೆನಪಿನ ಪುಟಗಳಲಿ ಅಚ್ಚಳಿಯದ ಕಂತು!
ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೨೩/೦೧/೨೩
ವಂದನೆಗಳು🙏🏻
No comments:
Post a Comment