ನೋಡಲು ಚಂದ,
ಒಮ್ಮೆ ಸಾಗರದಲ್ಲಿ
ಒಮ್ಮೆ ಮೋಡದಲ್ಲಿ
ಒಮ್ಮೆ ಬೆಟ್ಟದ ಸಾಲುಗಳಲ್ಲಿ
ಮರೆಯಾಗುವ ಅವನ !
-----------;-------------;-----------;----------
ವಿನುತ,
ಕವಿಹೃದಯ ಹೀಗೇನೆ...ಕವಿಸಮಯ ಇದುವೇನೆ!
ದಿಢೀರನೆ ಮನಬಿರಿದು, ಚಂದನದ ಘಮತಳೆದು
ನಿಂತೆಡೆಯೆ ಹುಟ್ಟುತ್ತ, ಕೂತೆಡೆಯೆ ಕಟ್ಟುತ್ತ
ರಸಗಂಗೆ ಹರಿಹರಿದು, ಮೈದುಂಬಿ ಕುಣಿಕುಣಿದು
ಪಟಪಟನೆ ಲಿಪಿಪುಟಿದು, ಪದಮೂಡಿ, ಪದಬೆಳೆದು
ಸರಸರನೆ ಸರತಿಯಲಿ ಪದಬೆಸೆದು, ಪದಹೊಸೆದು
ಎದೆಮೀಟಿ ಶ್ರುತಿಹಿಡಿಯೆ ಕನ್ನಡದ ನುಡಿಮಾಲೆ
ಹಾಡಾಗಿ ಅನುರಣಿಸೆ ಕವಿವಾಣಿ ಮಧುಶಾಲೆ!
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೦೮/೧೧/೨೦೨೪
ನಿನ್ನ ಸಾಲುಗಳು ಚೆನ್ನಾಗಿವೆಯಮ್ಮ, ನಿನಗೆ ಮೊನ್ನೆ ಬರೆದ ಸಾಲುಗಳು ಬಘೀರ ಚಿತ್ರದ ಮಧ್ಯಂತರದಲ್ಲಿ ಮೂಡಿದ್ದು. ಹೀಗೆ ದಿಢೀರನೆ ಮೂಡುತ್ತವೆ...ಕೆಲವೊಮ್ಮೆ ಮಾತು, ಹಲವೊಮ್ಮೆ ಮೌನ🙂

No comments:
Post a Comment