*ಅಸ್ಥಮದ ಮನಸ್ಥಿತಿ !!*
ಪಡುವಣದ ದಾರಿ ಕರೆದಿದೆ ಎನ್ನ
ಇಂದಿಗೆ ಕೊನೆಯದಾಗಿ ನೋಡಲು ಅವನ !
ಕೆಂಬಣ್ಣದ ರಂಗು ಹರಡಿದೆ ಬಾನ
ಸಂಜಿಗೆ ಬೊಗಸೆ ಬೆಳಕ ಬೇಡಲು ಅವನ !
ಪವಡಿಸುವ ಪರಿ ನೋಡೋದೆ ಚೆನ್ನ
ಓಡಿದೆ ಅಸ್ಥಮದ ಬೀದಿಗೆ ಕಾಣಲು ಅವನ !
ಅಗಲಿದ ಭಾವ ಕಾಣದೆ ಇನ್ನ
ಹೋದರೆ ಜಾರಿ ಸಾಧ್ಯವೆ ಮರೆಯಲು ಅವನ !
ಮಸಣದ ಮೌನ ಆವರಿಸಿದೆ ನನ್ನ
ಚಿಂತೆಗೆ ಜಾರಿದೆ ಮನಸು ನೆನೆಯಲು ಅವನ !
ಇರುಳಿನ ದಾರಿ ಸಾಗದೆ ಬೇಗ
ನೊಂದಿದೆ ಹೃದಯ ದಿನವೂ ಕಾಯಲು ಅವನ !
ಮೂಡಣದ ದಿಕ್ಕು ಸಜ್ಜಾಗಿದೆ ನಾಳೆಗೆ
ಕಾದಿದೆ ಬೆಳಕಿಗಾಗಿ ಭೂಮಿಯ ಒಡಲು ಅವನ !
ಉದಯದ ಕಿಡಿ ಸೋಕಿದೆ ಮತ್ತೆ
ಮರಳಿದೆ ಎಲ್ಲ ನೆನಪು ಪುನಃ ತಿರುಗಲು ಅವನ !
ವಿನುತ .ಕೆ.ವಿ
-----;------;--------;-------;--------;-------;------;-----
[14/8/2024, 20:06] Bosch Vinutha: Hegide antha heli.. hage enadru Spell corrections idre heli... I did not check
[14/8/2024, 22:02] Santosh SG: ಸಂಧ್ಯಾರಾಗದ ಸೊಬಗನ್ನು ಆಸ್ವಾದಿಸಿ ಮೂಡಿಹ ಕವಿತೆ ಸುಂದರವಾಗಿದೆ ವಿನುತ👏🏻👏🏻🤝😍
ನಿನ್ನಲ್ಲಿನ ಕವಿಹೃದಯ ವಿಕಸಿಸಿ ಭಾವ ಕುಸುಮವು ಅರಳಿ ಕವಿತೆಯಾಗುತಿರುವುದು ಖುಷಿಯ ವಿಷಯ. ಬರವಣಿಗೆ ಹೀಗೆ ಮುಂದುವರೆಯಲಮ್ಮ...
ಇದನ್ನು ಓದಿ ನನಗನಿಸಿದ್ದು...
........
ಸಂಜೆಯೊಂದಿಗೆ ಅವನ ಅಸ್ತಮಾನದ ದೃಶ್ಯ
ಸವಿಯುತ್ತ ಕವಿಮನದಿ, ಮುದದಿ ಉದಯಿಸಿದೆ
ಅರುಣರಾಗದಿ ಕೂಡಿ ಅನುರಾಗದ ಹೂದೋಟ
ಒಲವಸಿರಿ, ವಿರಹದುರಿ, ಏಕಾಂತ, ದೃಷ್ಟಾಂತ
ಘಮಿಸುತ ರಂಗೇರಿ ಭಾವ ಕುಸುಮದ ರಾಶಿ!
ತೋರಿಹುದು, ಕಾಡಿಹುದು ಷೋಡಶಿಗೆ ಪ್ರೇಮಕಾಶಿ!!
ರವಿಶಶಿಯ, ಕವಿಸಮಯ ಮೇಳೈಸಿ ರತಗೀತ!
ಸಿಹಿಸೊಗಸು, ಕಹಿಬಿರುಸು ಹದಗೊಳಿಸಿ ಸಖಿಗೀತ
ಅವನೆನುವ ನೆನಪದುವೆ, ತನುಮನಕೆ ನವನೀತ!!
........
'ಅಸ್ಥ' ಎನ್ನುವ ಪದವನ್ನು 'ಅಸ್ತ' ಮಾಡಮ್ಮ.
ಇನ್ನೆಲ್ಲವೂ ಪಕ್ಕಾ...☺️

No comments:
Post a Comment