ಓ ನನ್ನ ಮಳೆಬಿಲ್ಲೆ !!
ಸೂರ್ಯ ಕಿರಣ ತಾಕದಂತೆ
ಮಳೆಯ ಹನಿಯು ಸೊಕದಂತೆ
ಕೊಡೆಯ ಹಿಡಿವೆ ನೀ ನನಗೆ ಮಳೆಬಿಲ್ಲೆ
ಓ ನನ್ನ ಮಳೆಬಿಲ್ಲೆ
ಧರೆಗೆ ಬಣ್ಣ ಸುರಿಯುವಂತೆ
ಬಾನಿಗೆ ಏರೋ ಏಣಿಯಂತೆ
ಸಣ್ಣ ಹನಿಗೆ ಬೆಳಕ ಸೋಕಿ ಮೂಡಿರುವೇ
ಓ ನನ್ನ ಮಳೆಬಿಲ್ಲೆ...
ನಮ್ಮಿಬ್ಬರ ಅನುರಾಗದ ಸೇತುವೆಯು ನೀನೆ ನೇ
ಬಣ್ಣವ ಈ ಒಲವಿಗೆ ಕೊಂಚ ಬೇಡುವೆನೇ...
ಕೆಂಪನೂ ಈ ಪ್ರೀತಿಗೆ ಕಾಣಿಕೆ ನೀಡುವೆಯಾ?
ಪ್ರೇಮದ ರಂಗೋಲಿಯ ಎದೆಯಲ್ಲಿ ಬರೆಯುವೆಯಾ?
ಮತ್ತೆ ಮತ್ತೆ ಕಣ್ಣ ಮುಂದೆ ಮೂಡುವೆಯ?
ರಂಗು ರಂಗು ಆಸೆ ತಂದು ಕಾಡುವೆಯಾ?
-----------;-----------:------------:---------;-----------
ವಿನುತ,
ನಿನ್ನ ಕವಿತ್ವ ಪ್ರೌಢಿಮೆ ದಿನ ಕಳೆದಂತೆ ಮಾಗುತ್ತ, ಹೆಚ್ಚು ಮೆರುಗನ್ನು ತೋರುತ್ತಿದೆ. ಓದಿದಷ್ಟು, ಕೇಳಿದಷ್ಟು ಖುಷಿಯಾಗುತ್ತೆ.
ಮಳೆಬಿಲ್ಲು ಎಲ್ಲರಿಗೂ ಪ್ರಿಯವಾದುದು.
ಅದರ ಸುತ್ತ ಸಾಗಿರುವ ನಿನ್ನ ಭಾವದೋಟ ಅನುರಾಗ ತೋಟವನ್ನು ಸೃಷ್ಟಿಸಿದೆ.
ನೀನು ಹಾಡದಿದ್ದರೂ ನಿನ್ನ ವಾಚನ ಸೊಗಸಾಗಿದೆ, ಅದು ಸಿದ್ಧಿಸಿದೆ...
ಈ ಮೊದಲು ಎಷ್ಟೋ ಕವಿತೆಗಳನ್ನು ಓದಿರುವೆ, ಅದರ ಕುರಿತು ನಾನು ಬರೆದಿರುವೆ.
"ಕೊಂಚ" ಎಂದು ನೀನು ಇಲ್ಲಿ ಹೇಳಿರುವ ಪರಿ ಮಾತ್ರ ಯಾರನ್ನಾದರೂ ಮಣಿಸದೆ ಇರದು👌🏻☺️🙏
ಹೀಗೆ ಹೊಸ ಹೊಸ ವಿಷಯಗಳು ನಿನ್ನ ಕಾವ್ಯಕುಂಚಕ್ಕೆ ಓಟ ನೀಡಲಿ, ಕಲ್ಪನೆಯ ಹರವನ್ನು ಬೆಳೆಸುತ್ತ ಸಾಗಲಿ...
ನಿನ್ನ ಪಡುವಣದ ಮಳೆಬಿಲ್ಲಿಗೆ ನನ್ನ ಮೂಡಣದ ಮಳೆಬಿಲ್ಲು☺️
ಸೃಷ್ಟಿ ಮೂಡಿಸಿದ ರಂಗುರಂಗಿನ ರಂಗವಲ್ಲಿ
ದೃಷ್ಟಿ ಬೆಳಗಿಸಿದೆ ಕುಣಿಕುಣಿದು ಕವಿ ಕಾವ್ಯದಲ್ಲಿ
ಮಳೆಬಿಲ್ಲಿನ ಚಿತ್ತಾರದ ಸುತ್ತ, ಮನದಾಳದ ಸೊಬಗು
ಕಾಮನಬಿಲ್ಲಂತೆ ಬಳುಕುತ್ತ, ಒಲವೆದೆಯ ಮೆರುಗು
ಚಿಮ್ಮುತ್ತ, ಹರಿಯುತ್ತ ರಸಗಂಗೆ ಬೆಡಗು
ಮೀಯುತ್ತ, ಸವಿಯುತ್ತ ರಸಿಕರಿಗೆ ಬೆರಗು!
ಅನುರಾಗ ಪಲ್ಲವಿಸಿ ತನಿರಸದ ಫಲನ
ಹೂ ಮಳೆಯ ತುಂತುರಲಿ, ರತಿ ಬಯಸಿ ಮದನ
ಏಳು ಬಣ್ಣದ ಹಸೆ ಮೂಡಿ ಸಿಂಗರಿಸಿ ಸದನ
ಬಣ್ಣದೋಕುಳಿಯಲ್ಲಿ ಭೂ-ಗಗನ ಮಿಲನ
ಆಶ್ವಯುಜ ಮಾಸದ ತಂಗಾಳಿ ಸ್ಪರ್ಶ
ಮೇಘ ಮಾಲೆಯು ತೇಲಿ ಅಂಬರದಿ ವರ್ಷ
ಇಳೆಯಲಂಬಾರಿ ಸಾಗಿ ದಿಬ್ಬಣದ ಹರ್ಷ
ದ್ವಾಪರದ, ಗೋಕುಲದ ರತಗೀತ ದರ್ಶ!
.....
ಶುಭವಾಗಲಿ🙏☺️
##########################
ನೆನ್ನೆ ಕಳುಹಿಸಿದ ಕವನದ ಸಾಲುಗಳು ಛಂದೋಬದ್ಧವಾಗಿರಲಿಲ್ಲ, ರಾತ್ರಿ ಹಾಗೆಯೆ ಕಳಿಸಿಬಿಟ್ಟೆ. ಆದರೆ ಈಗ ಅದಕೆ ಹೊಸ ಉಡುಗೆ ತೊಡಿಸಿಬಿಟ್ಟೆ🙂
ನಿನ್ನ ಪಡುವಣದ ಮಳೆಬಿಲ್ಲಿಗೆ ನನ್ನ ಮೂಡಣದ ಮಳೆಬಿಲ್ಲು☺️
ಮಳೆಬಿಲ್ಲು
ಸೃಷ್ಟಿ ಮೂಡಿಸಿದ ರಂಗುರಂಗಿನ ರಂಗವಲ್ಲಿ
ದೃಷ್ಟಿ ಬೆಳಗಿಸಿದೆ ಕುಣಿಕುಣಿದು ಕವಿ ಕಾವ್ಯದಲ್ಲಿ
ಮಳೆಬಿಲ್ಲ ಚಿತ್ತಾರದೊಳು, ಮನದಾಳದ ಸೊಬಗು
ಕಾಮನಬಿಲ್ಲಿನೊಲು ಬಳುಕಿ, ಒಲವೆದೆಯ ಮೆರುಗು
ಚಿಮ್ಮುತ್ತ, ಹರಿಯುತ್ತ ರಸಗಂಗೆ ಬೆಡಗು
ಮೀಯುತ್ತ, ಸವಿಯುತ್ತ ರಸಿಕರಿಗೆ ಬೆರಗು!
ಅನುರಾಗ ಪಲ್ಲವಿಸಿ ತನಿರಸದ ಪ್ರತಿಫಲನ
ಹೂಮಳೆಯ ತುಂತುರಲಿ, ರತಿಯ ಸೇರಿದ ಮದನ
ಏಳು ಬಣ್ಣದ ಹಸೆ ಮೂಡಿ ಸಿಂಗರಿಸಿದ ಸದನ
ಬಣ್ಣದೋಕುಳಿಯಲ್ಲಿ ಭೂ-ಗಗನ ಮಿಲನ
ಆಶ್ವಯುಜ ಮಾಸದ ತಂಗಾಳಿ ಸ್ಪರ್ಶ
ಮೇಘ ಮಾಲೆಯು ತೇಲಿ ಅಂಬರದಿ ವರ್ಷ
ಇಳೆಯಲಂಬಾರಿ ಸಾಗಿ ದಿಬ್ಬಣದ ಹರ್ಷ
ದ್ವಾಪರದ, ಗೋಕುಲದ ರತಗೀತ ದರ್ಶ!
.....
ಶುಭವಾಗಲಿ🙏☺️
No comments:
Post a Comment