ನಿಮ್ಮೊಳಗೆ ನಾನೊಬ್ಬ, ನನ್ನೊಳಗೆ ನಾನೊಬ್ಬ!
ಒಬ್ಬೊಬ್ಬರೂ ಒಬ್ಬ, ಒಬ್ಬೊಬ್ಬರಿಗೂ ಒಬ್ಬ!
ಸೃಷ್ಟಿಯೆ ಹೀಗಲ್ತೆ?! ಮೇಣ್ ದೃಷ್ಟಿಯೆ?!
ಚೋದ್ಯಮದು ಸಹಜ ಬಿಡಿ! ಅಬ್ಬಬ್ಬ!!
ನಮ್ಮ ನಡತೆಯ ಬಿಂಬ, ಮನದ ಭಾವದ ಪ್ರತಿಬಿಂಬ!
ಆವುಟವ ಬದಿಗೊತ್ತಿ ಸಹಜತೆಯ ಮೆರೆ ನಾವು
ಆಟೋಪ ಸರಿಸಿಟ್ಟು ಸರಳತೆಯ ತೊಡೆ ನಾವು
ಸುಂದರ ಜಗ ಅಹುದು, ಸ್ನೇಹ ಪ್ರೀತಿಯೆ ಆಗ ಮನಸು ಮನಸಿನ ತುಂಬ!
ಬದುಕು ಬರಹದ ಹುಡುಕು, ಇರುಳು, ಮರುಳಿಗೆ ಹೊಂಬೆಳಕು!
ಆವೇಶ ಬದಿಗೊತ್ತಿ, ಮನುಜತೆಯ ಶ್ರುತಿ ಮಿಡಿಯೆ
ಆವೃತಿಯ ಸರಿಸಿಟ್ಟು, ಸುಜ್ಞಾನ ಕೃತಿ ಮೆರೆಯೆ
ಸಂಭ್ರಮ ದಿನ ಅಹುದು, ಶಾಂತಿ ಕಾಂತಿಯೆ ಆಗ ಮನಸು ಮನಸಿನ ತುಂಬ!
ರಚನೆ - ಸಂತೋಷ ಸ.ಗು
ತಾರೀಖು - ೧೭/೦೨/೧೮
ಪ್ರೇರಣೆ: ನನ್ನ ಸಹೋದ್ಯೋಗಿ, ಆತ್ಮೀಯ ಗುರುದತ್ತ ಕಳುಹಿಸಿದ ಸಂದೇಶ ಮತ್ತು ನನ್ನ ನೆನೆದ ಮಧುರಕ್ಷಣ

No comments:
Post a Comment