Saturday, August 27, 2016

ಕವಿತೆ: ಸಂತೆಯಲ್ಲಿ ನಿಂತ ಕಬೀರ

"ಸಂತೆಯಲಿ ನಿಂತ ಕಬೀರ"

ಕಾತರದಿ ಕಾದಿರುವ ಕಂಗಳಿಗೆ ತಂಪೆರೆಯೆ,  ತೋರುವನು ಎಂದು, ತಣಿಸುವನು ಬಂದು,
ಅಪರೂಪದ ನುಡಿಮಾಲೆ ಕಟ್ಟಿ ಹಾಡಿದ ಹರಿಕಾರ,  ಅಂದಿನಾ ಗುರಿಕಾರ!  "ಸಂತೆಯಲಿ ನಿಂತ ಕಬೀರ"! 

ನೂರಾರು ವರುಷ ಹಿರಿತಹುದು ಅವನ ಇತಿಹಾಸ,  ಸಂಘರ್ಷ ಸರಮಾಲೆ ಎದುರಿಸಿ ಈಸಿ ಜಯಿಸಿ,  ಎಲ್ಲರೊಳೊಂದಾಗಿ, ಎಲ್ಲರಿಂ ಹೊರತಾಗಿ! ಎನಿಸಿದ ಸಂತೆಯಲಿ ಸಂತ, ಸೇರಿದ  ನಿಶ್ಚಿಂತ ಪಂಥ!
     
ಕಾಲಘಟ್ಟವ ಮೀರಿ, ಭಾವ ಲೋಕವ ಸೇರಿ,  ಲೋಕದೆಲ್ಲೆಯ ದೂಡಿ, ಹೂಡಿ ಜನಪದ ಮೋಡಿ
ಸಾರ್ವಕಾಲಿಕ ಸತ್ಯ! ಮನುಜ ಮತವನು ತೋರಿ,  ಎಲ್ಲರೊಂದೆನುತ, ತಾ ಬೇರೆ ಎನಿಸಿದ "ಸಂತ" ಧೀಮಂತ! 


ರಚನೆ - "ಸಂತ"(ಸ ಗು ಸಂತೋಷ) ತಾರೀಖು: 29/07/2016
ವಂದನೆಗಳೊಂದಿಗೆ,
ಸಂತೋಷ್ ಸಖರಾಯಪಟ್ಟಣ  

ಪ್ರೇರಣೆ: ಶಿವಣ್ಣನ " ಸಂತೆಯಲ್ಲಿ ನಿಂತ ಕಬೀರ" ಚಿತ್ರ ತೆರೆ ಕಾಣಬೇಕಿದ್ದ ದಿನಗಳು    

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...