ನಮ್ಮ "ಸೃಷ್ಟಿ"
ಏನು ಕವಿತೆ ಬರೆಯುವುದೊ ತೋರದೆ ಈ ಕ್ಷಣ!
ಭಾವದೆದೆಗೆ ಉಣಬಡಿಸಿದ್ದರೂ ರಸದೌತಣ!
ಸರಳ ಜೀವನದ ಸಂತೋಷ ಯಾನ
ಶ್ರುತಿ ಹಿಡಿಯೆ ಮಾಧುರ್ಯ! ಮಂಜುಳಾ ಗಾನ!
ನಿತ್ಯೋತ್ಸವ! ಏರುತೇರುತ ಸುಖದ ಸೋಪಾನ
ಪಂಚೇಂದ್ರಿಯಕೆ ಸದಾ ಸರಸ ಮಧುಪಾನ!
'ನವ' ವರ್ಷ, ನವ ಹರ್ಷದ ವರ್ಷ!
ನವ ಹುಟ್ಟು, ನವ ತಾರಣದ ಹುಟ್ಟು!
ಸೃಷ್ಟಿಯದ್ಭುತವೆ! ಸುದೈವ ಸುಕೃತವೆ!
ಅಪರಿಮಿತ ಔನ್ನತ್ಯ! ಉತ್ಕೃಷ್ಟ! ಅತಿಶಯ!
ದೈವ ತೋರುವ ದಿವ್ಯ, ಜೀವ ಜೀವನ ಲೀಲೆ
ಅನಂತ! ಅದ್ವಿತೀಯ! ನಿರುಪಮ! ಅನುಪಮ!
ಏನೆ ಬರೆದರು ಕಡಿಮೆ, ಏನೆ ಬಣ್ಣಿಸೆ ಕೊರತೆ!
ಗುಪ್ತಗಾಮಿನಿ ಒರತೆ, ಸೃಷ್ಟಿಯೊಂದಿನ ಕವಿತೆ!
ರಚನೆ : "ಸಂತ" ( ಸಂತೋಷ್.ಎಸ್.ಜಿ )
ತಾರೀಖು: ೨೫/೦೫/೨೦೧೬
ಪ್ರೇರಣೆ: ನನ್ನ ಮಗಳು "ಸೃಷ್ಟಿ"
No comments:
Post a Comment