ಸವಿನೆನಪು
ಆಹಾ! ಎಂಥ ದಿನಗಳು, ಮರೆಯಲಾಗದ ಚಣಗಳು
ಮೂರು ವರ್ಷದ ಬಾಳಲಿ, ಭಾಗ್ಯನಗರದ ಬಳುವಳಿ
ನೃಪತುಂಗ ಓದು, ಹೊರನಾಡ ಬಾದು
ಏರಿಳಿತ ತೂಗು, ಹೊಸತನದ ಸೋಗು
ಛಲಘನದ ಜೋಗು, ತಂತನದ ಮಾಗು
ಮನೆಯಲ್ಲಿ ಮೋಪು, ಗುರುದೈವ ಕಾಪು... ಕಂಡುದಲ್ಲಿಯೆ ನಾನು
ಕೆಳೆಕೂಟ ನಲವು, ಪಾಠಾಟ ಸೊಗವು
ಓದಿನಲಿ ಯಶವು, ನೇಹದಲಿ ಜಸವು
ಕರುನಾಡ ವರವು, ಕನ್ನಡದ ಚೆಲುವು
ಎಲ್ಲೆಲ್ಲೂ ಗೆಲುವು, ಊರೆಡೆಗೆ ಒಲವು... ಕಂಡುದಲ್ಲಿಯೆ ನಾನು
ತುಂಟರಿನ ಸಂತೆ, ತರಲೆಗಳ ಕಂತೆ
ಹದಿಹರಯ ತಳಕು, ಬಿಸಿಕಾಯ ಚಳಕು
ಒಮ್ಮೊಮ್ಮೆ ತೊಡಕು, ಒಮ್ಮೊಮ್ಮೆ ಕೆಡುಕು!
ಬದುಕಿನ ಹುಡುಕು, ಗೆಳೆತನದ ಬೆಳಕು.. ಕಂಡುದಲ್ಲಿಯೆ ನಾನು
ಓದೆನ್ನೆ ನವನೀತ, ಜಸದಲ್ಲಿ ವಿನೀತ
ಸಾಹಿತ್ಯ ಸಂಗೀತ, ಮನೆಮನದಿ ಸುನೀತ
ಮನದನ್ನೆ ರತಗೀತ, ನೇಹದಲಿ ಪುನೀತ
ಓಜರ್ಗೆ ಸುಪ್ರೀತ, ಬಾಳೆಲ್ಲ ಸಂಪ್ರೀತ... ಕಂಡುದಲ್ಲಿಯೆ ನಾನು
ರಚನೆ: ’ಸಂತ’(ಸ.ಗು ಸಂತೋಷ)
ತಾರೀಖು: ೧೭/೦೮/೦೫

No comments:
Post a Comment