Wednesday, May 22, 2019

ಕವಿತೆ: ವಿಶ್ವ ಕಾವ್ಯ ದಿವಸ

ಈಗ ಪೂರ್ಣ ರೂಪದಲ್ಲಿ ನಿಮ್ಮ ಮುಂದೆ☺

  "ವಿಶ್ವ ಕಾವ್ಯ ದಿವಸ"

"ವಿಶ್ವ ಕಾವ್ಯ ದಿವಸ" ಕೆಂದೆ ಪೂರ್ಣ ಚಂದಿರ!
ಬಣ್ಣ ತುಂಬಿ, ಬೆಳಕು ಚೆಲ್ಲಿ, ಸೃಷ್ಟಿ ಸುಂದರ!
ಹೋಳಿ ಹಬ್ಬ, ಹೊಸತು ಕಬ್ಬ, ರಂಗಿನಂಬರ!
ಸ್ವರ್ಗ ಸಿರಿಯ ದಿವ್ಯ ಸೆರೆಗೆ ಕವಿಯ ಅಂತರ!!

ಎಲ್ಲ ಮರೆತು, ಕಲೆತು, ಬೆರೆತು ರಾಗ ಸಂಗಮ
ಕುಣಿದು, ಕುಣಿಸಿ ನಲಿದು ನಲಿಸಿ, ಸೊಗಸು ಸಂಭ್ರಮ
ಕಾಮ ದಹನ, ವರ್ಣ ವದನ! ರಮ್ಯ, ಅನುಪಮ!
ಚೈತ್ರ ಬರುವ, ತರುವ ಸಿರಿಯ, ಕೃತಿಯೆ ನಿರುಪಮ!!

ಭಾವ ಗಂಗೆ ಹರವಿಗಿಂದು ರಂಗಿನೋಕುಳಿ
ನೆನಪಿನಲೆಗೆ ಮನಸು ಮಿಂದು   ಕಾಮ ಕಚಗುಳಿ!
ಬಣ್ಣ ಬಣ್ಣದರಿವೆ ಚೆಲುವೆ, ಸ್ವಪ್ನ ಸುಂದರಿ
ಕವಿಯ ಕುಂಚ ಬಳಸಿ ಬಳುಕಿ ಕಾವ್ಯ ಮಂಜರಿ!

ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೨೧/೦೩/೨೦೧೯

ಪ್ರೇರಣೆ: ನಲ್ಮೆಯ ವರದರಾಜು ಈ ದಿನದ ಪ್ರಯುಕ್ತ ಕಾವ್ಯಾತ್ಮಕವಾಗಿ ನಾಲ್ಕು ಸಾಲುಗಳ ಬರೆವಂತೆ ಕೋರಿದುದು

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...