Wednesday, May 22, 2019

ಕವಿತೆ: ಅಮ್ಮಂದಿರ ದಿನ

ಮಾತೃದೇವೋಭವ, ಪಿತೃದೇವೋಭವ 🙏🏻

ವಿಶ್ವ ಅಮ್ಮಂದಿರ ದಿನವಿಂದು!
ಜಗದೆ ಸಂಭ್ರಮದ ದಿನವೆಂದು!
ನಿಮಿಷದ ನುಡಿ ನಮನ
ಅನಿಮಿಷ ಇದೊ ನಿಮಗೆ!

ದಿನಕೊಂದು ಹೆಸರಿರಿಸಿ, ವಿಶ್ವದೆಲ್ಲೆಡೆ ತಿಳಿಸಿ
ಎಲ್ಲರಲ್ಲೊಂದಾಗಿ ಆ ದಿನದೆ, ಆ ಕ್ಷಣದೆ ಆಚರಿಸಿ!
ಭಾವಸಾಗರದಿ ಮಿಂದೇಳುವ ಜಗದ ಪ್ರತೀತಿ
ಇದಕೆ ಹೊರತಹುದು, ಭಿನ್ನವದು ನನ್ನಯ ರೀತಿ!

ಎನ್ನಾತ್ಮ ಮಂದಿರದಿ, ಭಾವಾಂತರಂಗದಲಿ
ಅತ್ಯಪರೂಪ ರೂಪ! ನಿಮ್ಮದೆ ಆ ದೈವ ರೂಪ!
ಸಾರ್ಥಕತೆ ಸ್ವರೂಪ! ಪರಮಾರ್ಥ ಪ್ರತಿರೂಪ!
ಆ ಬದುಕು, ಸತ್ಯ ಸಾಧನೆ, ಇದಕೆನ್ನ ನಿತ್ಯಾರಾಧನೆ!

ಸತ್ಯವಲ್ಬತ್! ನುಡಿ ನಿಮ್ಮ ಬಿಕ್ಕೆ, ನಡೆ ನಿಮ್ಮ ಬಿಕ್ಕೆ,
ಈ ಜೀವ ಜೀವನವೆ ನೀವಿತ್ತ ಸುಕೃತದ ಬಿಕ್ಕೆ!
ಪುಟ್ಟಿನಿಂ ನಿಮ್ಮ ಮಗನೆನಿಸಿ ಧರೆಗಿಳಿದ ಎನಗೆ,
ಸಾವಿನಾಚೆಗೂ ನೀವೆ, ಜನ್ಮಜನ್ಮಾಂತರಕೂ ತಾಯಿ ತಂದೆ!!

ತಾರೀಖು: ೧೨/೦೫/೨೦೧೯
ರಚನೆ: "ಸಂತ" (ಸ.ಗು ಸಂತೋಷ)

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...