Monday, October 28, 2019

ಕವಿತೆ: ಬದುಕಲಾರದ ಬದುಕು

              ಬದುಕಲಾರದ ಬದುಕು

ದಣಿದ ಜೀವವ ಮತ್ತೆ ಇನ್ನೆಷ್ಟು ದಣಿಸುವಿರಿ
ಬಿಟ್ಟು ಬಿಡಿ ಸಾಕಿನ್ನು ಕರುಣೆ ತಳೆದು!
ಸಮೆದ ಮನಸುಮವನ್ನು ಮತ್ತೆಷ್ಟು ಹಿಸುಕಿವುರಿ, ಚಿತ್ತ ವಧೆ ನಿಲ್ಲಿಸಿರಿ ಶಾಂತಿ ತಳೆದು

||೧||
ನಿಮ್ಮ ನಿಮ್ಮ ಹಮ್ಮು, ಹಕ್ಕು ಸೊಕ್ಕಿನ ಬಿಮ್ಮು
ಬಡಬಾಗ್ನಿಯಂತಡರಿ ನಿತ್ಯ ಸುಡುತಿದೆ ಇಲ್ಲಿ
ಮಾತು ಮೌನದ ಅಸ್ತ್ರ, ಕಣ್ಣೀರಿನ ವಸ್ತ್ರ, ಎಡೆಬಿಡದೆ ಬಂದಿರಿದು ಘಾಸಿಮಾಡಿಹುದಿಲ್ಲಿ!
ಆವುಟದ ಮೊರೆ, ಕೂಗು, ಅನೃತದ ನೆರೆ, ಸೋಗು ಅವ್ಯಾಹತವಿಲ್ಲಿ ಏಕೊ ಕಾಣೆ
ಮೋಹ ಮಾಟದ ಆಟ, ಪ್ರೀತಿ ಮಾಯೆಯ ಕಾಟ ಮರುಳಾಗಿಸಲೆಂದು ಏಕೊ ಕಾಣೆ!! ||೧||

||೨||
ಬಯಸೆಲ್ಲರ ಮೆಚ್ಚುಗೆ, ಮೊದಲ ಸಾಲು ಹುಚ್ಚಿಗೆ
ಹೊರಗೆ ಆದರ್ಶ ಹೊದಿಕೆ, ಒಳಗೆ ಅನರ್ಥ ತಡಿಕೆ!
ನೀವು ನಿಮ್ಮ ಕನಸು, ಇದು ಮಾತ್ರವೇನೆ ಸೊಗಸು
ಲೆಕ್ಕ ಸಿಗದು ಇದಕೆ, ಬಲಿಯಾದ ಕನಸು ಮನಸು!
ಹಾವು ಏಣಿಯ ರೀತಿ, ಏರಿಳಿತದ ಭೀತಿ ದಹಿಸುತಿದೆ ಎಲ್ಲರನು, ತಿಳಿಯದಾಗಿದೆ ಏಕೆ?!
ಹಾಲು ಜೇನಿನ ಬೆಸುಗೆ, ವಿಷಮ ತಿರುವಿನ ಒರೆಗೆ, ನಲುಗಿ ಸವೆಯುತಿದೆ ಕಾಣದಾಯಿತು ಏಕೆ?!
||೨||

ರಚನೆ: "ಸಂತ" (ಸ.ಗು ಸಂತೋಷ)
ತಾರೀಖು: ೨೫/೧೦/೨೦೧೯

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...