Friday, October 16, 2020

ಕವಿತೆ: ಹುಟ್ಟು ಹಬ್ಬ


     ಹುಟ್ಟುಹಬ್ಬ!


ಹುಟ್ಟು, ಮರುಹುಟ್ಟುಗಳ ನೆಮ್ಮಿ ನಡೆಯುವ ಈ ಬದುಕು

ಬಯಸುವುದು ಬೇಡೆಲ್ಲದರ ನಡುವೆ ಸವಿಚಣಗಳ ತುಣುಕು!!


ಕೆಳೆಯರೊಂದಿಗೆ ಹರಟೆ, ಹರಿದು ನೆನಪಿನ ಒರತೆ

ಸರಳ, ಸುಮಧುರ ಭಾವ,  ಬೆಸೆದು ಸುಂದರ ಕವಿತೆ!

ಹುಟ್ಟು ಹಬ್ಬದ ದಿನದಿ, ಸಂಭ್ರಮಿಸಿದ ಚರಿತೆ

ಶಾಲೆಯಂಗಳದಲ್ಲಿ ಮೈತ್ರಿ ರಶ್ಮಿಯ ಘನತೆ!


ನೋವು ಬೇವಿನ ವಲ್ಲಿ, ತಾ ಹಬ್ಬುಬ್ಬುವಲ್ಲಿ

ಬೇಕು ಬೇಕಿವು ಇಲ್ಲಿ, ಸಾಕು ಸಾಕೆನುವಲ್ಲಿ

ನಕ್ಕು ನಲಿಯುವ ಸೊಗದ ಬಣ್ಣದೋಕುಳಿ ಚೆಲ್ಲಿ 

ನಿತ್ಯ ಬೆಳಗುವ ಸಿರಿಯ, ಪೂರ್ವಿ ರಶ್ಮಿಯ ಮಲ್ಲಿ!


ಸ್ನೇಹ ಸವಿಯಲಿ ಮಾಗಿ, ಮನಸು ಮಿಡಿಯುವ ಹೊತ್ತು

ಜಗದ ಭಿತ್ತಿಗಳಿರವು, ಇರದು ಯಾವುದೆ ಕುತ್ತು

ವಿಮಲ ನಿರ್ಮಲ ಮಾತು, ಪ್ರೀತಿ ಮಮತೆಯ ಬಿತ್ತು

ಮಂದ ಮಾರುತ ಬೀಸು, ದಿವ್ಯ ರಶ್ಮಿಯ ಕೊತ್ತು!


ರಚನೆ: "ಸಂತ" (ಸ.ಗು ಸಂತೋಷ್)

ತಾರೀಖು: ೧೬/೧೦/೨೦೨೦

ಪ್ರೇರಣೆ: 

ಸರಣಿ ಸಾವಿನ ನೋವಲ್ಲಿ ಬಳಲಿದ ಮನಸು, ಏಕಾಂತದಿ ಸುಂದರ ತೆಂಗಿನ ತೋಟದ ನಡುವೆ ವಿಶ್ರಮಿಸಿದಾಗ ಮೂಡಿದ ಭಾವಲಹರಿ.

Time flies so fast...I was in Istanbul airport on this day last year waiting for long to board my flight back home. Within a year so much has happened. Last one month has been   too harsh and for sure we all need some brighter moments.


Sitting in a place of serenity, peace of mind is quite natural to come to all. This makes me recall moment of birthday celebrations. Simple but special!!



No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...