ನನ್ನ ಜನ್ಮ
ದೇವ ನೀಡಿದ ಜನ್ಮ ವರವೇನೆ!
ಜನ್ಮ ನೀಡಿದ ನೀವು ದೈವಾನೇ!
ದೇವ ದೈವದ ನಿತ್ಯೋಪಾಸನ
ಜೀವ ಜೀವನ ಜೀಕಿ ತಾರಣ!
ಹೃದಯದಾಲಯದಿ ದೀಪ ಬೆಳಗಿಸಿ
ಪತ್ರ ಪುಷ್ಪದಲಿ ಪೂಜೆ ಸಲ್ಲಿಸಿ
ಸೂರ್ಯ ಚಂದ್ರರೆ ಸಾಕ್ಷಿ ಎನ್ನುತ
ಜನುಮ ನೀಡಿದ ನಿಮಗೆ ಬಾಗುವೆ
ಮೌನ, ಧ್ಯಾನದ ವೀಣೆ ಮೀಟುತ
ಅಂತರಂಗದ ನಾದ ಹೊಮ್ಮುತ
ಬಾನು ಬುವಿಗಳೆ ಸಾಕ್ಷಿ ಎನ್ನುತ
ಜನುಮ ನೀಡಿದ ನಿಮಗೆ ಬೇಡುವೆ
ಹುಟ್ಟು ಸಾವಿನ ಗುಟ್ಟು ಚಿಂತಿಸಿ
ನಡುವೆ ಬದುಕಿನ ಕಟ್ಟು ಬಾಳಿಸಿ
ಜನ್ಮ ಜನ್ಮಕೆ ಸಾಕ್ಷಿ ಬಾಳುವೆ!
ಜನ್ಮ ಜನ್ಮಕೆ ಸಾಕು ಬಾಳುವೆ!
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೧೯/೦೬/೨೦೨೨
ಪ್ರೇರಣೆ: ನನ್ನ ಬದುಕು
ದೈವಕ್ಕೆ ಜನ್ಮದಾತರಿಗೆ ಋಣಿಯಾಗಿ ಆರಾಧಿಸುವ ಬಗೆಯನ್ನು ಬಿತ್ತರಿಸಿರುವೆ.
ಜೀವ ಎಂಬ ಪದಕ್ಕೆ ಅನೇಕ ಅರ್ಥಗಳಿವೆ...(ಜೀವಾತ್ಮ, ಪ್ರಾಣಿ, ಜೀವನ, ನೀರು, ಬಯಕೆ, ಉದ್ಯೋಗ, ಗುರು,...) ಇವೆಲ್ಲವನ್ನು ಜೀವನದಲ್ಲಿ ತೂಗಿಸುತ್ತ ನಡೆಸುವ ತಾರಣದ ಬಗ್ಗೆ ಪ್ರಸ್ತಾಪಿಸಿರುವೆ.
ನಮ್ಮ ಜನ್ಮ ಎಂಥಹದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವುದು ನಾವು ಕಟ್ಟಿಕೊಳ್ಳುವ ಬದುಕು...
ಈಗ ನೋಡಿರುವ ಜೀವನದ ತಾರಣವನ್ನು ಅವಲೋಕಿಸಿದಾಗ ತೃಪ್ತಿ ಇದೆ... ಮುಂದಿನೆಲ್ಲ ಜನ್ಮಕ್ಕೆ ಇಷ್ಟು ಸಾಕೆಂಬ ನಿರ್ಲಿಪ್ತತೆಯೂ ಇದೆ.
No comments:
Post a Comment