ಘಾಟಿ! ನಾಟು!
ಘಾಟಿ ಘಾಟಿ...
ಘಾಟಿ
ಘಾಟಿ, ಘಾಟಿ, ಘಾಟಿ, ಘಾಟಿ! ಘಾಟಿ!
ನಾಟು ಘಾಟಿ!
ಮಾತನಾಡೆ ಹೊರಟಾಗ ಚಿನಕುರುಳಿ ಸಿಡಿಸುವಂತೆ
ಓಟವೆಂದು ನಿಂತಾಗ ಹುಲ್ಲೆ ಪುಟಿದು ಮಿಂಚುವಂತೆ!
ನಗೆಯ ಬೀರಿ ಮೋಡಿ ಹಾಕಿ, ತುಂಟ ಮಾಯೆ ಸೆಳೆಯುವಂತೆ
ಸದ್ದು ಇರದೆ ಲೀಲೆ ಮುಗಿಸಿ, ಸುದ್ದಿ ಮಾಡಿ ಬೀಗುವಂತೆ!
ಪ್ರೀತಿ ಬೆಣ್ಣೆ ಸಿಗಲು ಮಾತ್ರ...
ಪ್ರೀತಿ ಬೆಣ್ಣೆ ಸಿಗಲು ಮಾತ್ರ,
ಬಾಲ ಕೃಷ್ಣ ಕರಗುವಂತೆ!
ಇವನಾರು ಹೇಳು, ಇವನಾರು ಕೇಳು
ಇವನೆ ಘಾಟಿ!
ಘಾಟಿ ಘಾಟಿ ಘಾಟಿ ಘಾಟಿ!
ಘಾಟಿ!
ನಾಟು ಘಾಟಿ!
ಎಲ್ಲಿ ಹೋದರಲ್ಲಿ ಗೆಲ್ಲ, ಇವನದೇನೆ ಗಮ್ಮತ್ತು
ಏನೆ ದೊರೆಯೆ ಸಾಕು ಒಡನೆ, ತೋರುವನು ಕಸರತ್ತು!
ಎಂಥ ಆಟ ಇರಲಿ ಖಚಿತ, ಮೆರೆವುದಿವನ ಗೈರತ್ತು!
ಎಷ್ಟೆ ಕಷ್ಟ ಇರಲಿ ಬಿಡನು, ಕುಗ್ಗದಿವನ ತಾಕತ್ತು
ನೀಡುವನು ಬಿಡುವು ಮಾತ್ರ... ನೀಡುವನು ಬಿಡುವು ಮಾತ್ರ, 'ಮಲಗಿದರೆ' ಸ್ವಲ್ಪ ಹೊತ್ತು!!
ಇವನಾರು ಹೇಳು, ಇವನಾರು ಕೇಳು
ಇವನೆ ಘಾಟಿ!
ಘಾಟಿ, ಘಾಟಿ, ಘಾಟಿ, ಘಾಟಿ! ಘಾಟಿ!
ನಾಟು ಘಾಟಿ!
ನಾಟು, ನಾಟು ಎಂದು ಹಾಡಿ ಕೇಕೆ ಹಾಕಿ ಹಕ್ಕಿಯಂತೆ!
ಹಳ್ಳಿ ಹಾಡು ಕೇಳಿ ಮೆಚ್ಚಿ, ಮೋಡ ಕಂಡ ನವಿಲಿನಂತೆ!
ದೇವ ಲೋಕ ಅಪ್ಸರೆಯರ ಕೀರ್ತಿ ಮೊಟಕು ಮಾಡುವಂತೆ!
ಕುಣಿಸಿ ಕುಣಿದು, ತಣಿಸಿ ನಲಿದು, ಮಣಿಸಿ ನಾಟ್ಯ ಯೋಗಿಯಂತೆ!
ಆಟ ಮುಗಿಯೆ ಆಗ ಮಾತ್ರ...
ಆಟ ಮುಗಿಯೆ ಆಗ ಮಾತ್ರ,
ಧ್ಯಾನ ಶಿಲಾ ಮೂರ್ತಿಯಂತೆ!
ಇವನಾರು ಹೇಳು, ಇವನಾರು ಕೇಳು
ಇವನೆ ಘಾಟಿ!
ಘಾಟಿ, ಘಾಟಿ, ಘಾಟಿ, ಘಾಟಿ! ಘಾಟಿ!
ನಾಟು ಘಾಟಿ!
ರಚನೆ: ಸಂತ (ಸ.ಗು ಸಂತೋಷ್)
ತಾರೀಖು: ೧೯/೦೭/೨೨
😌😌😌
ನಮ್ಮ ಘಾಟಿ ಸ್ಕಂದನ ನಾಟು ವೈಭವ👍🏻
No comments:
Post a Comment