Friday, January 3, 2025

ಕವಿತೆ: ಈಗಷ್ಟೆ ತಾನೆ ಬಂದಿಹೆ

ಆಹಾ...ಆಹಾ...😍

ಎಂಥಹ ಹಾಡಿನ ಆಯ್ಕೆ, ಎಂಥಹ ಭಾವಾನುವಾದ...🤝 ಅದ್ಭುತ ರಚನೆ, ಗಾಯನ... ಮೆಚ್ಚಿದೆ ವಿನುತ...ಅಭಿನಂದನೆಗಳು👏🏻👏🏻


ನಿನ್ನ ಕವಿತೆ ಓದಿದೆ, ನಿನ್ನ ಕವಿತೆ ಕೇಳಿದೆ

ರಫ಼ಿಯ ಹಾಡು ಕಾಡಿದೆ,  ಕವಿಯ ಹೃದಯ ಹಾಡಿದೆ!!


ಅದೇ ಧಾಟಿಯಲ್ಲಿ ನನ್ನ ಕೆಲವು ಸಾಲುಗಳು... ದೇವಾನಂದ್, ರಫ಼ಿ ಜೋಡಿಗೆ ಸಾಹಿರ್ ಸಾಲುಗಳ ಭಾವಾನುವಾದ

.......


ಈಗ ಬಿಟ್ಟು ಹೋಗದಿರು ಮನಸಿಗೆ ತಣಿವು ನೀಡದೆ!!!


ಈಗಷ್ಟೆ ತಾನೆ ಬಂದಿಹೆ, 

ಈಗಷ್ಟೆ ತಾನೆ


ಈಗಷ್ಟೆ ತಾನೆ ಬಂದಿಹೆ, 

ವಸಂತ ಚೆಲುವ ಚೆಲ್ಲಿಹೆ

ತಂಗಾಳಿ ತುಸು ಘಮಿಸಲಿ ಕಣ್ನೋಟ ತುಸು ಚಲಿಸಲಿ

ಈ ಸಂಜೆ ಇಷ್ಟು ಜಾರಲಿ


ಈ ಸಂಜೆ ಇಷ್ಟು ಜಾರಲಿ

ತುಸು ಮನಸು ಹಗುರವಾಗಲಿ!

ನಾ ಸ್ವಲ್ಪ ಕಾಲ ಬಾಳುವೆ

ಮಧು ಸವಿಯ ಮೆಲ್ಲ ಹೀರುವೆ!


ಹೀಗೇನು ನೀನು ಹೇಳದೆ

ಮಾತೇನು ನೀನು ಆಡದೆ

ಈಗ ಬಿಟ್ಟು ಹೋಗದಿರು ಮನಸಿಗೆ ತಣಿವು ನೀಡದೆ!

.......


ನಿನ್ನ ಬರವಣಿಗೆ ಮುಂದುವರೆಯಲಮ್ಮ👍🏻🙏


---------;---------;---------;--------;-------


Abhina jao chod kar... ಕನ್ನಡ Version

ಮನದ ಮಾತು 

Lyrics:

ಮನದಾ ಮಾತು ಕೇಳದೆ,

ನಿನ್ನೇ ಪ್ರೀತಿ ಮಾಡಿದೆ....

ಮನದಾ ಮಾತು ಕೇಳದೆ

ನಾ ನಿನ್ನೇ ಪ್ರೀತಿ ಮಾಡಿದೆ...

ಕೂಗಿ ಕರೆದು ಹೇಳುವೆ 

ನಾ ಕೂಗಿ

ಕೂಗಿ ಕರೆದು ಹೇಳುವೆ

ನಿನ್ನೇ ಪ್ರೀತಿ ಮಾಡುವೆ...

ತಂಪಾದ ಗಾಳಿ ಬೀಸಲು 

ಹಿತವಾದ ಮಾತು ಆಡಲು 

ಈ ಸಂಜೆ ಸಮಯ ಸವಿಯುವ 

ಜೊತೆಯಾಗಿ ನಾವು ನಡೆಯುವ

ತುಸು ದೂರ ಹೀಗೆ ಸಾಗುವ

ಇನ್ನಷ್ಟು ಸನಿಹ ಬಯಸುವ

ಇನ್ನಷ್ಟು ಸನಿಹ ಬಯಸುವ

ಇನ್ನೇನು ನಾನು ಕೇಳೆನು

ಇನ್ನೇನು ನಾನು ಬಯಸೆನು

ಮನದಾ ಮಾತು ಕೇಳದೆ 

ನಾ ನಿನ್ನೇ ಪ್ರೀತಿ ಮಾಡಿದೆ...

 -  ವಿನುತ

https://www.instagram.com/reel/C4tASzCNyGA/?igsh=d3ZycTBtZmVnM3lr


 

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...