ಗುರುದತ್ತ ನಮೋ
ಮುದಿತ ವನದೊಳು ಕುಳಿತು, ಗುರುದತ್ತನ ಧ್ಯಾನ
ಉದಿತ ಶಾಂತಿಯು ನೆಲೆಸಿ
ಸ್ವರ್ಗ ರಮ್ಯೋದ್ಯಾನ!
ಬೀಸುತಿಹ ತಂಗಾಳಿ, ರಮಿಸಿ ತೀಡಲು ಎಲ್ಲ
ಮೈಯೊಡ್ಡಿ, ನೆನೆಮನವು ಇನಿತು ದಣಿವಿಲ್ಲ
ಸೂಸುತಿಹ ನರುಗಂಪು, ಘಮಿಸಿ ತಾಕಲು ಮೆಲ್ಲ
ಮೈದಳೆದು, ಮಿಂದು ಮನ
ಇನಿತು ಕಮಟಿಲ್ಲ!
ಮೆಲ್ಲುಲಿಯು, ಚಿಲಿಪಿಲಿಯು ಮಿಡಿದು, ನುಡಿಸಲು ಎಲ್ಲ
ಋತುಗಾನ, ರತಗಾನ
ಇನಿತು ಬೇಸರವಿಲ್ಲ
ವನರಾಶಿ, ಇನರಶ್ಮಿ ಹೊಳೆದು ಬೆಳಗುತ ಮೆಲ್ಲ
ಸೊಗಪಾನ, ಹಿತಯಾನ
ಇನಿತು ತಾಮಸವಿಲ್ಲ!
ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೧೫/೧೨/೨೦೨೪
ಪ್ರೇರಣೆ: ಆತ್ಮೀಯ ಗುರುದತ್ತನ ಆಗಮನದ ನಿರೀಕ್ಷೆಯಲ್ಲಿ, ನನ್ನ ನೆಚ್ಚಿನ 'ಕಹಳೆ ಬಂಡೆ'ಯ ಉದ್ಯಾನದಲ್ಲಿ ಕುಳಿತಾಗ ಮೂಡಿದ ಸಾಲುಗಳು
---------;-------;------;------;-------
ನಿಮ್ಮ ಈ ಪ್ರೀತಿಗೆ ಮಾತುಗಳು ಹೊರಡುತ್ತಿಲ್ಲ 🙏🏼🙏🏼
ಪೂರ್ಣವಾಗಿ ಓದಲು ಈಗ ವಿಮಾನದಲ್ಲಿ ಸಮಯ ಸಿಕ್ಕಿತು.
ನಿಮ್ಮ ಪ್ರವಾಸ ಮುಗಿದ ನಂತರ ತಿಳಿಸಿ. ಮತ್ತೆ ಭೇಟಿಯಾಗೋಣ.L

No comments:
Post a Comment