ನಮ್ಮೆಲ್ಲರ ಮುದ್ದು ಸ್ಕಂದನಿಗೆ ಐದು ವರ್ಷಗಳು ತುಂಬಿದೆ. ಹುಟ್ಟು ಹಬ್ಬದ ಶುಭಾಶಯಗಳು ಸ್ಕಂದ🤝👏🏻👏🏻👏🏻😍😘🎊🎉🍫🎂 🙌🏻
ನಿನ್ನವತಾರಕೆ, ನಿನ್ನಾಗಮನಕೆ ಹರ್ಷೋಲ್ಲಾಸದ ಚಂದದ ಪರ್ವಕೆ
ಇಂದಿಗೆ ತುಂಬಿತು ವರ್ಷಗಳೈದು!
ಬಾಲ ಮುಕುಂದ ನಿನಗೀಗೈದು
ಐದೆಯರೆಲ್ಲರ ಬಯಕೆಯ ರೂಪ
ಸುಂದರ ವದನ, ಸ್ಕಂದ ಸ್ವರೂಪ
ಶಾರದೆ ಪೋಷಿತ ವಿದ್ಯಾತೀಕ್ಷ್ಣ
ಜಗವನೆ ಕುಣಿಸುವ ತುಂಟ ಶ್ರೀಕೃಷ್ಣ
ಮನೆಯೊಳಗೆಲ್ಲರ ಮುದ್ದು ಕಿಶೋರ
ನುಡಿದರೆ ಕವಿನುಡಿ, ಗೀತ, ಮಲ್ಲಾರ
ಇದ್ದೆಡೆ ಅಲ್ಲಿಯೆ ದಿವ್ಯ ವಿಹಾರ
ಸಂತಸ, ಸಂಭ್ರಮ, ಸರಸ ತುಷಾರ!
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೦೨/೧೦/೨೦೨೪
No comments:
Post a Comment