'ಸಿಂದೂರ ತಿಲಕ'
ಕೈ ಮುಗಿವೆ, ಜೈ ಎನುವೆ; ಕೈ ಮುಗಿವೆ, ಜೈ ಎನುವೆ
ಬಾಳಿಸುವ ಭಾರತಿಗೆ, ಕಾಪಿಡುವ ಭರತನಿಗೆ
ನಿತ್ಯ ಭಿನ್ನತೆಯ, ವಿಭಿನ್ನತೆಯ ಹೊತ್ತು ಮೆರೆಯುವ ನಾಡು
ಸತ್ಯ! ಶಾಂತಿಯ, ವಿಶ್ರಾಂತಿಯ ಇತ್ತು ಪೊರೆಯುವ ಬೀಡು
ಕೈ ಮುಗಿವೆ, ಜೈ ಎನುವೆ ಬಾಳಿಸುವ ಭಾರತಿಗೆ
ನಿತ್ಯ ಪ್ರಧಾನ, ಅಭಿಮಾನದಿ ಇಟ್ಟು 'ಸಿಂದೂರ' ತಿಲಕ
ಯುಕ್ತ ಶಾಂತವ, ವಿಕ್ರಾಂತವ ತೊಟ್ಟು ಕಾಯುವ ಸೈನಿಕ!
ಕೈ ಮುಗಿವೆ, ಜೈ ಎನುವೆ ಕಾಪಿಡುವ ಭರತನಿಗೆ
ನಿತ್ಯ ಸಾಗಿದೆ, ಮುಂದಾಗಿದೆ ಮಂಗಳೆಗೊಪ್ಪೊ ಸಿಂಗಾರ
ಮುಖ್ಯ ತೋರಿದೆ, ಗುರುತಾಗಿದೆ ನಿಟಿಲ ನಡುವಲಿ ಸಿಂದೂರ!
ಕೈ ಮುಗಿವೆ, ಜೈ ಎನುವೆ ಬಾಳಿಸುವ ಭಾರತಿಗೆ
ನಿತ್ಯ ತೋರಿದೆ, ಬೇರೂರಿದೆ ಯೋಧರಿಗೊಪ್ಪೊ ಠೇಂಕಾರ
ಭವ್ಯ! ಭೂಷಣ! ವಿಭೂಷಣವು ಹಣೆಗೆ ವಿಜಯದ ಸಿಂದೂರ!
ಕೈ ಮುಗಿವೆ, ಜೈ ಎನುವೆ ಕಾಪಿಡುವ ಭರತನಿಗೆ
ವಿಶ್ವಮಾತೆಯ ತನುಜಾತೆ
ಲೋಕ ವಂದಿತೆ, ಜಗನ್ಮಾತೆ
ದಿವ್ಯಾರಾಮದ ಶ್ರೀಲಲಿತೆ
ವಾಣಿ, ಪರಿಣತೆ, ಶ್ರೀವನಿತೆ
ಕೈ ಮುಗಿವೆ, ಜೈ ಎನುವೆ ಬಾಳಿಸುವ ಭಾರತಿಗೆ
ಸರ್ವ ಸಮತೆಗೆ, ಸಮನ್ವಯಕೆ
ಧೀರರಗಲಿದ ಇತಿಹಾಸ
ಇಂದು, ಮುಂದಿನ, ಮುಂಬಾಳಿನ ಹಾದಿ ಬೆಳಗಿದ ಇತಿಹಾಸ
ಕೈ ಮುಗಿವೆ, ಜೈ ಎನುವೆ ಕಾಪಿಡುವ ಭರತನಿಗೆ
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೧೧/೦೫/೩೦೨೫
ಪ್ರೇರಣೆ: ಆಪರೇಷನ್ 'ಸಿಂದೂರ' ಮೇ-೨೦೨೫... ಮಾತೃದೇವೋಭವ🙏
No comments:
Post a Comment