ಯಾವುದೆ ಒಂದು ಇಂಥಹ ಕೆಲಸ ಶುರು ಮಾಡಲು "ಟೀಸರ್...ಟ್ರೇಲರ್" ಎಲ್ಲಾ ಬೇಕು...ಅಲ್ವಾ...
ಇದು ಅಲ್ಲಿನ ಕನ್ನಡ ನಾಡಿನ ಬಳಗಕ್ಕೆ...
ಇದನ್ನು ಹೇಗೆ ಬಳಸೋದು ಅದರ ಬಗ್ಗೆ ಕೆಲವು ಆಲೋಚನೆಗಳು ಇವೆ...
ಮುಂದೆ ಅದು ಬರುತ್ತೆ...
ಸದ್ಯಕ್ಕೆ ನನ್ನ ತಂಗಿಯ "ಹೊಲಿಗೆ ಮನೆ" ಗೆ ಈ ಕವಿತೆ... ಅದಕ್ಕೆ ನಾನು ಇಟ್ಟಿರುವ ಹೆಸರು "ಸನ್ನಿಧಿ"❤️
" *ಹೊಲಿಗೆ ಮನೆ*"
ಎಲ್ಲರ ಮೆಚ್ಚಿನ ಹೊಲಿಗೆಯ ಮನೆಗೆ!
ಬನ್ನಿರಿ, ಸ್ವಾಗತ, 'ಸನ್ನಿಧಿ'ಯೊಳಗೆ!
ಬಣ್ಣ ಬಣ್ಣದ ಸುಂದರ ಉಡುಪು
ಧರಿಸಲು ಮನಸಿಗೆ ಹಿಗ್ಗು, ಸೊಗಸು!
ಇಂಥಹ ಅನುಭವ ಎಲ್ಲರ ಕನಸು
ನನಸು ಮಾಡುವುದು ಇಲ್ಲಿನ ದಿರಿಸು
ವಿಶಿಷ್ಟ ಉಡುಗೆಯ ರೂಪ ಲಾವಣ್ಯ
ತೊಟ್ಟರೆ ಒಡನೆಯೆ ಹೊಸ ಚೈತನ್ಯ!
ವಿಸ್ಮಯ ಇಲ್ಲಿನ ವಸ್ತ್ರ ವಿನ್ಯಾಸ
ಎಲ್ಲೆಡೆ ದೊರಕದ ಮುಕ್ತ ವಿಶ್ವಾಸ
ಅಂದವ ಹೆಚ್ಚಿಸಿ, ಚಂದವ ಮೆರೆಸುವ
ವೇಷ ಭೂಷಣಕೆ ಹೊಸ ಅಧ್ಯಾಯ
ನೆಚ್ಚುತ ಒಮ್ಮೆ ಬಂದರೆ ನೀವು
ಇಲ್ಲಿಯೆ ಮೊದಲು, ಇಲ್ಲೆ ಮುಕ್ತಾಯ!
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೦೧/೦೨/೨೦೨೫
ಪ್ರೇರಣೆ: ನನ್ನ ಸೋದರಿ ವಿದ್ಯಾ ತಾನು ಸಿದ್ಧ ಮಾಡಿರುವ ಬಣ್ಣ ಬಣ್ಣದ ಉಡುಪುಗಳನ್ನು ತೋರಿಸಿದಾಗ ಅದರ ವಿನ್ಯಾಸಕ್ಕೆ, ನಾವೀನ್ಯತೆಗೆ, ಉತ್ಕೃಷ್ಟತೆಗೆ ನಿಬ್ಬೆರಗಾದೆ. ಅವಳೊಂದು"ಹೊಲಿಗೆ ಮನೆ" ಶುರುಮಾಡುವಂತೆ ಹರಸಿದೆ, ಪ್ರೋತ್ಸಾಹಿಸಿದೆ.
ನನ್ನ ತಂಗಿ ಈ ನಿಟ್ಟಿನಲ್ಲಿ ಬಹು ದೊಡ್ಡ ಪ್ರಯಾಣ ಮಾಡಬೇಕು, ಯಶಸ್ಸು ಕಾಣಬೇಕು, ಆನಂದ ಗಳಿಸಬೇಕು ಎಂದು ಆಶಿಸುತ್ತ, ನಾನೂ ಅದರಲ್ಲಿ ಭಾಗಿಯಾಗುವ ಜವಾಬ್ದಾರಿಯನ್ನು ಇಟ್ಟುಕೊಂಡು ಪ್ರೀತಿಯಿಂದ ಈ ಕವಿತೆಯನ್ನು ಅವಳ ಕಲೆಗೆ ಅರ್ಪಿಸುತ್ತಿದ್ದೇನೆ.


No comments:
Post a Comment