ನೆನ್ನೆ (೧೪/೦೬/೨೦೩೫) ಬಸವನಗುಡಿಯ ಬಿ.ಎಮ್.ಎಸ್ ಕಾಲೇಜಿನ ಸಭಾಂಗಣದಲ್ಲಿ 'ಎಸ್. ಎಲ್. ಭೈರಪ್ಪ ಪ್ರತಿಷ್ಠಾನ' ಲೋಕಾರ್ಪಣೆಗೊಂಡ ಅಮೃತ ಘಳಿಗೆಗೆ ನಾವುಗಳು ಸಾಕ್ಷಿಯಾಗಿದ್ದು ನಮ್ಮ ಪುಣ್ಯ, ಅದಕ್ಕೆ ಸಾಧ್ಯವಾದ ರೀತಿಯಲ್ಲಿ ತೊಡಗಿಸಿಕೊಂಡು, ಅದರ ಆಶಯಗಳನ್ನು ಜವಾಬ್ದಾರಿಯುತವಾಗಿ ನೆರವೇರಿಸಿದರೆ ಈ ಜೀವ ಧನ್ಯ🙏
ಜನಪ್ರಿಯ ವಿಶ್ವವಾಣಿಯ ವಿಶ್ವೇಶ್ವರ ಭಟ್ಟರ ಮುಂದಾಳತ್ವದಲ್ಲಿ ಶತಾವಧಾನಿ ಡಾ|| ಆರ್. ಗಣೇಶ್, ಖ್ಯಾತ ಕಾದಂಬರಿಗಾರ್ತಿ ಸಹನಾ ವಿಜಯಕುಮಾರ್ ( Sahana Vijayakumar ) , ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಾಹಿತ್ಯ ಭಂಡಾರದ ಅರುಣ ( ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ ) ಹಾಗೂ ಸಂತೇಶಿವರದ ವಾವೆಯಲ್ಲಿ ಭೈರಪ್ಪನವರ ಸೋದರರಾದ ಕೃಷ್ಣಪ್ರಸಾದ್ ಇವರುಗಳ ಉಪಸ್ಥಿತಿಯಲ್ಲಿ, ಕಾರ್ಯಕ್ರಮದ ಕೇಂದ್ರಬಿಂದು, ಪ್ರತಿಷ್ಠಾನದ ಮೂಲಕ ವಿದ್ಯಾರ್ಥಿಗಳಿಗಾಗಿ ಸಹಾಯ ಹಸ್ತ ನೀಡುವ ಕಾರ್ಯಕ್ರಮಗಳ ಕನಸು ಕಂಡಿರುವ ಡಾ|| ಎಸ್ ಎಲ್ ಭೈರಪ್ಪನವರ ಸಮ್ಮುಖದಲ್ಲಿಯೆ, ರೂಪಾ ಗುರುರಾಜ ( Roopa Gururaj) ಅವರ ನಿರೂಪಣೆಯ ಸಾರಥ್ಯದಲ್ಲಿ ಈ ಪ್ರತಿಷ್ಠಾನದ ಲೋಕಾರ್ಪಣೆ ಕಾರ್ಯಕ್ರಮ ಬಹಳ ಚೆನ್ನಾಗಿ ನೆರವೇರಿತು.
*ಎಸ್ ಎಲ್ ಭೈರಪ್ಪ ಪ್ರತಿಷ್ಠಾನ*
ಜ್ಯೇಷ್ಠ ಮಾಸದ, ಬಿಡುವಿರದ ತುಂತುರಿನ ಸೋನೆ ಮಳೆ
ವಿದ್ವನ್ಮಣಿಗಳ, ಅಭಿಮಾನಿಗಳ ನಡುವೆ ವಿಶ್ವವಾಣಿಯ ಸೆಲೆ!
ಮೌಲ್ಯಯುತ ಬದುಕು, ಪ್ರತಿಬಿಂಬ ಬರವಣಿಗೆ, ನಿತ್ಯ 'ಅನ್ವೇಷಣೆ'
ಧ್ವನಿಸಿತು 'ಎಸ್.ಎಲ್ ಭೈರಪ್ಪ ಪ್ರತಿಷ್ಠಾನ'ದ ಲೋಕಾರ್ಪಣೆ!
ಬಸವನಗುಡಿಯಲ್ಲಿನ ಸಂಜೆ, ಕಿಕ್ಕಿರಿದಿದ್ದ ಕಾಲೇಜು ಸಭಾಂಗಣ
'ಸಾಕ್ಷಿ'ಯಾಗಲು ಹೊಸ 'ಪರ್ವ'ಕ್ಕೆ ಸಜ್ಜಾದ ಸಂತಸದ 'ಆವರಣ'!
ಲೆಕ್ಕಿಸಿದೆ ಬೇರೇನು, ಅಲ್ಲೆಲ್ಲರದೂ ಒಬ್ಬರದೆಯೆ ನಾಮಜಪ!
ಸಾಹಿತ್ಯ ಭಂಡಾರ, ಸರಸತಿಯ ವರಪುತ್ರ, ನಮ್ಮವರು ಭೈರಪ್ಪ!
ಜೀವ'ಯಾನ'ದಲಿ ಹಲವಾರು 'ಕವಲು', ಕಂಡಿಹರು ಅನೇಕ 'ನೆಲೆ'
ಆದರೂ ಹುಟ್ಟೂರೆನೆ ಎಲ್ಲಿಲ್ಲಿದ ಪ್ರೀತಿ, ಅತ್ಯಧಿಕ ಬೆಲೆ!
'ಸತ್ಯ ಮತ್ತು ಸೌಂದರ್ಯ', 'ಜಲಪಾತ'ದವತರಣದಲ್ಲಿ
ಬರಡು ಸಂತೆಯ ಭಗೀರಥ, ದಂತಕಥೆ ನಮ್ಮೆದುರಲ್ಲಿ!
'ಗೃಹಭಂಗ'ವೊ, 'ಮಂದ್ರ', ತಾರಕವೊ, ಏನಿರಲಿ ಉಪೋದ್ಘಾತ
ಜೀವನವೆ ಹೋರಾಟ, ಅದುವೆ ಸಖಿಗೀತ, ಮುಂದಿನದು ವಿಧಿಚಿತ್ತ!
'ಗತಜನ್ಮ'ದ ಸುಕೃತ, ಇವರ ಪರ್ವದಲಿ ಈ ನಮ್ಮ ಜನ್ಮ, 'ಬೆಳಕು ಮೂಡಿತು'
ಈಗ ಕೊನೆಯ ಸರ್ಗದಲಿ ಉದ್ದಂಡ, 'ಉತ್ತರ ಕಾಂಡ', ಲೋಕ ಬೆಳಗಿತು!
ರಚನೆ: ಸಂತ (ಸ.ಗು ಸಂತೋಷ್)
ತಾರೀಖು: ೧೫/೦೬/೩೦೨೫


No comments:
Post a Comment