ಆನಂದ, ಆನಂದ, ಆನಂದ
ಬೇಕೆ ಬೇಕು ಆನಂದ! ಎಲ್ಲರಿಗೂ ಆನಂದ!
ಬೇಕೆ ಬೇಕು ಆನಂದ!
ಅರಿಶಿನ, ತುಪ್ಪ, ತುಳಸಿ, ಸಗಣಿ, ಶ್ರೀಗಂಧ ಪೂರಿತ ಆನಂದ
ಆಯುರ್ವೇದದ ಸಸ್ಯದ ಸಾರ ಕೊಡುವುದು ಅಭಯ ಆನಂದ
ಕೊಳ್ಳಿರಿ ಅದಕೆ ಆನಂದ, ಮನೆಯಲಿ ನೆಲೆಸುವುದು ಆನಂದ!
ಎಲ್ಲರಿಗೂ ಆನಂದ!
ಮಲ್ಲಿಗೆ, ಸಂಪಿಗೆ ಕೇದಿಗೆ ಕಂಪಿನ ಬಗಬಗೆ ಪರಿಮಳದಾನಂದ
ಚಂದಿರ, ಕೆಂಪು, ಚಂದದ ಹಳದಿ, ಬಣ್ಣಬಣ್ಣದಲಿ ಆನಂದ
ಕೊಳ್ಳಿರಿ ಅದಕೆ ಆನಂದ, ಮನೆಯಲಿ ನೆಲೆಸುವುದು ಆನಂದ!
ಎಲ್ಲರಿಗೂ ಆನಂದ!
ಹಚ್ಚಿದ ಕೂಡಲೆ ಘಮಘಮ ಸೂಸಲು, ಸೊಳ್ಳೆಗೆ ಮುಕ್ತಿ ಆನಂದ
ಕೀಟ ಕಾಟಕೆ ಒಡನೆ ಶಮನವು, ಶಾಂತಿ ನೆಮ್ಮದಿಗೆ ಆನಂದ
ಕೊಳ್ಳಿರಿ ಅದಕೆ ಆನಂದ, ಮನೆಯಲಿ ನೆಲೆಸುವುದು ಆನಂದ!
ಎಲ್ಲರಿಗೂ ಆನಂದ!
ಮಕ್ಕಳ ನಿದ್ದೆ ಭಂಗವಾಗದ ಹಾಗೆ ಕಾಯುವುದಾನಂದ
ಗಂಡ ಹೆಂಡಿರ ಪ್ರೀತಿ ಹೆಚ್ಚಿಸುವ ಮಾಯಾ ಧೂಪ ಆನಂದ
ಕೊಳ್ಳಿರಿ ಅದಕೆ ಆನಂದ, ಮನೆಯಲಿ ನೆಲೆಸುವುದು ಆನಂದ!
ಎಲ್ಲರಿಗೂ ಆನಂದ!
ದೇವರ ಸನ್ನಿಧಿಗಾನಂದ, ಪೂಜಾಪಾಠಕೆ ಆನಂದ
ಆಟಕೂಟದೆಡೆ ಆನಂದ, ನಿದ್ದೆ,ಹುದ್ದೆಯೆಡೆ ಆನಂದ
ಆನಂದ, ಆನಂದ, ಆನಂದ
ಬೇಕೆ ಬೇಕು ಆನಂದ!
ಎಲ್ಲೆಡೆ ಸಲ್ಲುವ ಆನಂದ, ಎಲ್ಲಾ ನೆಚ್ಚುವ ಆನಂದ!
ಬೇಕೆ ಬೇಕು ಆನಂದ!
No comments:
Post a Comment