ಹೀಗೊಂದು ....
ಋಷಿಕೇಶ ತೈಲ
ಪಾತ್ರ ೧:
ಅಯ್ಯೋ ದೇವರೆ ಇಂದೆಂಥಹ ದುರ್ವಿಧಿ!! ಇದೆಂಥಹ ದುರ್ವಿಧಿ!!
ಇದು ಯಾರು ಬರೆದ ಕಥೆಯೊ, ಯೌವ್ವನದಿ ಇಂಥ ವ್ಯಥೆಯೊ
ತಲೆಯಲ್ಲಿ ಕೂದಲಿಲ್ಲ, ಉದುರೆಲ್ಲ ಹೋಯಿತಲ್ಲ
ತಲೆಭಾರ ತಾಳಲಾರೆ, ನೋವಿಂದ ಏಳಲಾರೆ
ಪಾತ್ರ ೨:
ಚಿಂತಿಸಬೇಡಿ, ನಿಮ್ಮ ವ್ಯಥೆ ನಮಗೆ ತಿಳಿದಿದೆ, ಇದಕ್ಕೆ ನಮ್ಮ ಬಳಿ ಪರಿಹಾರವೂ ಇದೆ... ಇದನ್ನು ತಗೊಳ್ಳಿ...
ಪಾತ್ರ ೧:
ಏನಿದು? ಯಾವುದೊ ತೈಲದಂತಿದೆ?
ಪಾತ್ರ ೨:
ಅಂತಿಂಥ ತೈಲ ಇದು ಅಲ್ಲ, ಇದರಂಥ ತೈಲ ಎಲ್ಲಿಲ್ಲ
ಅಂತಿಂಥ ತೈಲ ಇದು ಅಲ್ಲ, ಇದರಂಥ ತೈಲ ಎಲ್ಲಿಲ್ಲ
ಪಾತ್ರ ೧:
ಹೌದೆ? ಅದು ಹೇಗೆ?
ಪಾತ್ರ ೨:
ಅರೆಬರೆ ಬುರುಡೆ ಇರಲಿ, ಪೂರ್ತಿ ಖಾಲಿಯೆ ಇರಲಿ
ಹಚ್ಚಿದ ಒಡನೆಯೆ ನೋಡಿ ಕೂದಲು ಸೊಂಪಾಗುವುದು
ಮೈಕೈ ನೋವು ಇರಲಿ,
ಉಳುಕಿನ ಬೇನೆಯೆ ಇರಲಿ
ಹಚ್ಚಿದ ಒಡನೆಯೆ ನೋಡಿ
ನೋವು ಮರೆಯಾಗುವುದು
ಯಾವುದೆ ಚಿಂತೆ ಬರಲಿ ತಲೆಯು ಸಿಡಿಸಿಡಿ ಎನಲಿ
ಹಚ್ಚಿದ ಒಡನೆಯೆ ನೋಡಿ
ಬುರುಡೆ ಹಗುರಾಗುವುದು
ಜಗಕೆ ಒಂದೇ ಒಂದು,
ಇಲ್ಲ ಇಂಥದು ಮತ್ತೊಂದು
ಒಂದೇ ತೈಲ ಎಲ್ಲಕೂ ಮದ್ದು
ಋಷಿಕೇಶ ತೈಲ, ನಮ್ಮ ಋಷಿಕೇಶ ತೈಲ
ಋಷಿಕೇಶ ತೈಲ, ನಮ್ಮ ಋಷಿಕೇಶ ತೈಲ
ಪಾತ್ರ ೧:
ಇದು ನಿಜವೆ?? ನಂಬಬಹುದೆ?
ಪಾತ್ರ ೨:
ಹಚ್ಚಿಕೊಂಡು ನೋಡಿ ಸ್ವಾಮಿ...
ಪಾತ್ರ ೧:
ಆಹಾ!! ನಿಮ್ಮ ಮಾತು ಸತ್ಯ, ನಿಮ್ಮ ಮಾತು ಸತ್ಯ!!
ಹೇ ನನಗಾಗಿಯೆ ಈ ತೈಲವು... ಹಾ...
ನನಗಾಗಿಯೆ ಋಷಿಕೇಶವು...
ಮರೆಯನು ನಿನ್ನ, ಜೊತೆಗಿರು ನನ್ನ ...ಎಲ್ಲೇ ಹೋಗಲು
ಪಾತ್ರ ೨:
ನೋಡುದ್ರಲ ಸರ್ ನಮ್ಮ ತೈಲದ ಮಹಿಮೆ... ಜನರಿಗೆ ಏನಂತೀರ?
ಪಾತ್ರ ೧:
ತಡಮಾಡದೆ ನೀವೂ ಬನ್ನಿ...
ಮನೆಮನೆಯಲ್ಲೂ ಇರಲೇಬೇಕು
ಋಷಿಕೇಶ ತೈಲ, ಋಷಿಕೇಶ ತೈಲ
ಪಾತ್ರ ೨:
ಒಂದೇ ತೈಲ ಎಲ್ಲಕೂ ಮದ್ದು,
ಋಷಿಕೇಶ ತೈಲ, ಋಷಿಕೇಶ ತೈಲ
No comments:
Post a Comment