"ಸವಿಸವಿನೆನಪು"
ಎಲ್ಲೋ ಜಾರಿದೆ ಮನಸು,ನೆನೆಯುತ್ತ ಹಳೆ ಸೊಗಸು,
ಇಂದಿಗೆಲ್ಲವೂ ಕನಸು! ಆಗಬಹುದೇ ಕೆಲ ನನಸು!
ಆವ ಬಂಧನ ಇರದೆ, ಹಗುರ, ಹೂಮನ ಹಕ್ಕಿ
ಎಂತದೋ ಉಲಿಯುತ್ತ, ಬಾನೆಡೆಗೆ ಜಿಗಿಯುತ್ತ,
ಬಂದಂತೆ ಹಾರುತ್ತ, ಸ್ಚಚ್ಛಂದ! ಚಂದನದ ಸೊಗಸು!
ಆವ ಕ್ಲೇಶವು ಇರದೆ, ಮೈತ್ರಿ ಮಲ್ಲಿಗೆ ಕಂಪು
ಇದ್ದಲ್ಲಿ ಘಮಿಸುತ್ತ, ಹೋದಲ್ಲಿ ಹರಡುತ್ತ
ಸಂಪ್ರೀತಿ ಹರಿಸುತ್ತ,ಅಭಿಮಾನ, ಅಕ್ಕರೆಯ ತಂಪು
ಆವ ಕರ್ಕಶ ಇರದೆ, ಮಧುರ ಮಂಜುಳ ಗಾನ
ಇಂಪನ್ನು ತುಂಬುತ್ತ, ನವಚೇತ ಸ್ಫುರಿಸುತ್ತ
ಎತ್ತಲೋ ಒಯ್ಯುತ್ತ, ಉನ್ಮಾದ, ಉಲ್ಲಾಸದ ಯಾನ!
ರಚನೆ - ಸಂತೋಷ್. ಎಸ್.ಜಿ
ತಾರೀಖು - 12/05/16
ಪ್ರೇರಣೆ: Remembering good old times with Nrupatunga friends
No comments:
Post a Comment