"ವಿಜಯ ರೇಖೆ"
ಜೋ........ಕೆ... !!!
ಮಾಯ ಸೋಂಕಿದು ಜೋಕೆ!
"ವಿಜಯ" ಸಿಕ್ಕಲು ಕೇಕೆ!
ಬಾಳ ಸುಳಿಯಲ್ಲಿ... ಮತ್ತೆ ಮೂಡಿತೆ ರೇಖೆ?!
ಕಾಯಕದಲಿ, ಬೆವರನು ಚೆಲ್ಲಿ, ನಿತ್ಯ ಮನ ಮಾಗುತ
ಸಾಧನೆಯಲಿ, ನೋವನು ತಳ್ಳಿ ನವ್ಯ ಜಯ ತೋರುತ
ಗೆಲವಿನ, ನಲವಿನ ಅನುಭವ ರೋಮಾಂಚನ!
ನೆಚ್ಚುತ, ಮೆಚ್ಚುತ, ಸೊಗಸಿನ ಹೂ ಸಿಂಚನ!
ಆರ್ಭಟಕೆಲ್ಲ, ಕೆಚ್ಛೆದೆ ಕಂಡು ಜೀವ ಹಸಿ ಮಾಡುತ
ಉಪಟಳಕೆಲ್ಲ, ಸಹನೆಯ ಉಂಡು ಭಾವ ಬಿಸಿಯಾಗುತ
ಒಪ್ಪಿಗೆ, ನಂಬಿಕೆ, ಮೆಲ್ಲನೆ ತಾ ಬೆಳೆಯುತ
ಮೆಚ್ಚುಗೆ, ಅಪ್ಪುಗೆ, ಉತ್ತುಂಗ ತಾ ಕಾಣುತ !
ಪಡುವಣದಲಿ ಸಂಧ್ಯೆಯು ಮೂಡಿ ಕನಸು ಹದಗೊಳ್ಳುತ
ಮೂಡಣದಲಿ ಕಿರಣವು ತೋರಿ ಮನಸು ಮುದ ಕಾಣುತ
ಸ್ನೇಹದ, ಪ್ರೀತಿಯ, ಸಂತೋಷ ಹೊಸದಾಗಿದೆ
ಕಾಣದ ಕಡಲಿನ ಸಂಭ್ರಮ ದೊರೆತಂತಿದೆ!!
ರಚನೆ - "ಸಂತ" (ಸ.ಗು ಸಂತೋಷ್)
ತಾರೀಖು - 14/03/17 Dedicating this poem to entire test fraternity... specially to the 2 we all talk about😊
ಜೋ........ಕೆ... !!!
ಮಾಯ ಸೋಂಕಿದು ಜೋಕೆ!
"ವಿಜಯ" ಸಿಕ್ಕಲು ಕೇಕೆ!
ಬಾಳ ಸುಳಿಯಲ್ಲಿ... ಮತ್ತೆ ಮೂಡಿತೆ ರೇಖೆ?!
ಕಾಯಕದಲಿ, ಬೆವರನು ಚೆಲ್ಲಿ, ನಿತ್ಯ ಮನ ಮಾಗುತ
ಸಾಧನೆಯಲಿ, ನೋವನು ತಳ್ಳಿ ನವ್ಯ ಜಯ ತೋರುತ
ಗೆಲವಿನ, ನಲವಿನ ಅನುಭವ ರೋಮಾಂಚನ!
ನೆಚ್ಚುತ, ಮೆಚ್ಚುತ, ಸೊಗಸಿನ ಹೂ ಸಿಂಚನ!
ಆರ್ಭಟಕೆಲ್ಲ, ಕೆಚ್ಛೆದೆ ಕಂಡು ಜೀವ ಹಸಿ ಮಾಡುತ
ಉಪಟಳಕೆಲ್ಲ, ಸಹನೆಯ ಉಂಡು ಭಾವ ಬಿಸಿಯಾಗುತ
ಒಪ್ಪಿಗೆ, ನಂಬಿಕೆ, ಮೆಲ್ಲನೆ ತಾ ಬೆಳೆಯುತ
ಮೆಚ್ಚುಗೆ, ಅಪ್ಪುಗೆ, ಉತ್ತುಂಗ ತಾ ಕಾಣುತ !
ಪಡುವಣದಲಿ ಸಂಧ್ಯೆಯು ಮೂಡಿ ಕನಸು ಹದಗೊಳ್ಳುತ
ಮೂಡಣದಲಿ ಕಿರಣವು ತೋರಿ ಮನಸು ಮುದ ಕಾಣುತ
ಸ್ನೇಹದ, ಪ್ರೀತಿಯ, ಸಂತೋಷ ಹೊಸದಾಗಿದೆ
ಕಾಣದ ಕಡಲಿನ ಸಂಭ್ರಮ ದೊರೆತಂತಿದೆ!!
ರಚನೆ - "ಸಂತ" (ಸ.ಗು ಸಂತೋಷ್)
ತಾರೀಖು - 14/03/17 Dedicating this poem to entire test fraternity... specially to the 2 we all talk about😊
No comments:
Post a Comment