Saturday, December 14, 2019

ಕವಿತೆ: ನಂದಾದೀಪ

         ನಂದಾದೀಪ

ಬೆಳಗಲಿ ಮನೆಯನು ಎಂದು ಈ ಜ್ಯೋತಿ ನಿಮಗಿಂದು
ಬೆಳಗುವ ಮನಸಿನ ಬಂಧು ಈ ಸ್ನೇಹ ನಿಮಗೆಂದು!

ನಿರ್ಮಲ ಮನಸು, ಸ್ನೇಹದ ಬಳಸು
ಜೊತೆಯಿರೆ ನಾವು ಎಲ್ಲೆಡೆ ಸೊಗಸು!
ತೋರದು ಮ್ಲಾನ, ನಲವಿನ ಗಾನ
ಜೀವನ ಸುಂದರ ರಮ್ಯೋದ್ಯಾನ

ಅಗಣಿತ ನೆನಪು, ಅವಿರತ ಹುರುಪು
ಕನಸಿನ ಲೋಕಕೆ ಬಗೆಬಗೆ ಉಡುಪು
ಕಾಡದು ಚಿಂತೆ,  ಯಾವುದೆ ಕಂತೆ
ಜೀವನ ನಿತ್ಯವೂ ಸುಂದರ ಸಂತೆ!

ಬಾಳಿನ ಪಯಣದಿ ಎಷ್ಟೋ ನಂಟು
ಇದ್ದರು ಬೆಳಗಲು ಕೆಲವೇ ಉಂಟು
ಅಂಥಹ ಮೈತ್ರಿಯೆ ದೈವ ಸ್ವರೂಪ
ಈ ಬಾಳನು ಬೆಳಗುವ  ನಂದಾದೀಪ!


ರಚನೆ -ಸಂತೋಷ್.ಎಸ್.ಜಿ
ತಾರೀಖು - 15/05/16

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...