ಹಠಯೋಗಿ
ಹಠಯೋಗಿ, ಹಠಯೋಗಿ, ಹಠಯೋಗಿ!
ಹಠಯೋಗಿ, ಹಠಯೋಗಿ, ಹಠಯೋಗಿ!
ಕಲ್ಲು-ಮುಳ್ಳುಗಳ ಮರಳು ಜಾಡಿನಲಿ
ಕನಸು, ಕಲ್ಪನೆಗೆ ಸಿಗದ ಗಿರಿನವಿಲು!
ಹಚ್ಚ ಹಸುರಿನ ವನರಾಶಿ ಸೃಜಿಸಿ
ಮನದ ಮಧುಗಿರಿ ಮಲೆಯಲ್ಲಿ ಕುಣಿಸಿ
ಜೋಗಿ, ತ್ಯಾಗಿ, ಯೋಗಿ ಇವನೇನೆ!
ಹಠಯೋಗಿ, ಹಠಯೋಗಿ, ಹಠಯೋಗಿ!
ಯಾರು ಕಾಲಿಡದ ಕೊಂಪೆ ಬೀಡಿನಲಿ!
ರಮ್ಯ ನಿಸರ್ಗದ ಸೊಬಗಿನ ವಿಕಸನ!
ಕರ್ಮವೆ ಧರ್ಮ, ಉಸಿರಂತಾಗಿಸಿ,
ವಿಜಯ ವಿಕ್ರಮ ಗತವೈಭವ ಮೆರೆಸಿ
ಜೋಗಿ, ತ್ಯಾಗಿ, ಯೋಗಿ ಇವನೇನೆ!
ಹಠಯೋಗಿ, ಹಠಯೋಗಿ, ಹಠಯೋಗಿ!
ಬೇರು, ಬೆವರುಗಳ ಬಯಸದೂರಿನಲಿ!
ನಿತ್ಯ ಉಳುಮೆಯ ಕಲರವ! ಪರಿಮಳ!
ಭೂಮಿ ತಾಯಿಗಿರೊ ವರಸುತನೆನಿಸಿ
ಅನ್ನದಾತರಲಿ ಮಾದರಿಯೆನಿಸಿ!
ಜೋಗಿ, ತ್ಯಾಗಿ, ಯೋಗಿ ಇವನೇನೆ!
ಹಠಯೋಗಿ, ಹಠಯೋಗಿ, ಹಠಯೋಗಿ!
ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೧೪/೦೮/೨೧
ಪ್ರೇರಣೆ: ಆತ್ಮೀಯ ವಿಜಯ್ ಸೃಷ್ಟಿಸಿರುವ ದಾಳಿಂಬೆ ವನಸಿರಿ!
No comments:
Post a Comment