ಸ್ಕಂದನಿಗೆ ಎರಡು
ನಮ್ಮ ಮನೆಯ ಮುದ್ದು ಕೃಷ್ಣ, ನಿನಗೆ ಎರಡು ತುಂಬಿತು
ಮನದಿ ಹರ್ಷ ಹೊನಲು ಹರಿದು, ಈಗ ಸೊಗಸು ಹೆಚ್ಚಿತು!
ಹಲವು ಬಗೆಯ ಆಟ ನಿತ್ಯ, ರಚಿಸೊ ಜಾಣ ತಾನು
ಕವಿಯ ಮನಕೆ ಲಗ್ಗೆ ಹಾಕಿ ಕುಣಿಸದಿರುವೆ ಏನು?!
ಅಜ್ಜಿ, ಅಜ್ಜ, ಅಕ್ಕ ಕಲೆತು ಜಪಿಸೊ ನಾಮ ನೀನು
ನೋಡಿ ನಲಿದು ಕೇಳಿ ಕುಣಿದು ಸೊಗಸು ಸವಿಯೊ ನಾವು
ಅಚ್ಚುಮೆಚ್ಚು ಎಲ್ಲರಿಗೂ ನಿನ್ನ ಬಾಲ ಲೀಲೆ
ತೆರೆವುದಲ್ಲೆ ನೋಡಿ ನಲಿಯೆ ನಮ್ಮ ನೆನಪ ಮಾಲೆ!
ಬಾಲ್ಯ, ಬಳಗ, ಊರು, ಕೇರಿ ಎಲ್ಲ ಬರಲೆ ಬೇಕು
ಮಂದಹಾಸ ಮೂಡಿ ತರುವ ಸಹಜ ನಲಿವು ಸಾಕು!
😊😊😊
No comments:
Post a Comment