Thursday, April 25, 2024

ಕವಿತೆ: ಗೀತ ಈಗ ವಾಸುದೇವನು

 " ಗೀತ ಈಗ ವಾಸುದೇವನು"


ಶಾಲೆಯ ಅಂಗಳದಿ ಅನುದಿನವು ಅವಿರತ ದೊರೆವ ರಸದೂಟ

ಗುರು-ಶಿಷ್ಯರ ಒಡನಾಟ, ಕೆಳೆಯರ ರತಕೂಟ, ನಡುವಲಿ ಪಾಠ

ನಾ ಮುಂದು ತಾ ಮುಂದು ಎಂದೆನುತ ಎಲ್ಲಕೂ ಗುದ್ದಾಟ

ಹುಡುಗ ಹುಡುಗಿಯರ ಮುಗಿಯಾದ ರಂಪಾಟ, ಚೆಲ್ಲಾಟ


ಎಲ್ಲರನು, ಎಲ್ಲವನು ತಹಬಂದಿಗಿಡಲೆಂದು

ಶಾಂತಿ, ಸಂಯಮ ನೆಲೆಸಿ ಓದು ಹಗುರಾಗಲೆಂದು

ಶಾಂತಿ ಮೂರುತಿಯ ಗುರು ಮೆಚ್ಚಿ ನೇಮಿಸಿದುದು ಸತ್ಯ!

ಮೇಲ್ವಿಚಾರಣೆ ಪ್ರತಿನಿತ್ಯ, ತರಗತಿಗೆ ಅತ್ಯಗತ್ಯ


ಉರುಳಿಹವು ದಶಕಗಳು, ಮಾಗಿಹವು ಮನಸುಗಳು

ಅಚ್ಚಳಿಯದೆ ಉಳಿದಿಹವು ಇವರಾಳಿದ 'ಆ ದಿನಗಳು'

ತಿರುಗಲೊಲ್ಲದ ಕತ್ತು, ಮಾತಿಗಿಲ್ಲದ ಕುತ್ತು, ಕಸರತ್ತು

ಬೆತ್ತ ಲಾತದ ಹೊತ್ತು ಬಿಸಿಮೌನಕೆ ಎಲ್ಲಿಲ್ಲದ ಗತ್ತು!


ನಾಡಹಬ್ಬವ ಸಂಭ್ರಮಿಸಿ ಹಗುರಾದ ಶುಭವೇಳೆ

ಶಾಂತಿಸಾಗರದಿ ಸಂಜನಿಸಿ, ಬೆಳೆದು ಕಡಲಮುತ್ತೆನಿಸಿ

ಕಾಲಚಕ್ರವು ತಿರುಗಿ, 'ಆ ದಿನಗಳು' ಹಿಂತಿರುಗಿ ಬಂದಿರಲು

ಎಚ್ಚರ, ಎಚ್ಚರ, ಮೈಯೆಲ್ಲ ಕಣ್ಣಾಗಿ ಕಟ್ಟೆಚ್ಚರ! 


ರಚನೆ: 'ಸಂತ' (ಸ.ಗು ಸಂತೋಷ್)

ತಾರೀಖು: ೦೩/೧೧/೨೩


ನಮ್ಮ ಗೀತಾಳ ಸುಪುತ್ರ ವಾಸುದೇವನಿಗೆ ಶುಭಕೋರುತ್ತ, ತಾಯಿ-ಮಗನಿಗೆ ಅಭಿನಂದನೆ ಸಲ್ಲಿಸುತ, ಈ ಸಂತಸವನ್ನು ಕೆಳೆಯರ ಕೂಟದೊಂದಿಗೆ ಹಂಚಿಕೊಂಡಿದ್ದಕ್ಕೆ, ನೆನಪಿನ ಬುತ್ತಿಯ ತೆರೆಸಿದಕ್ಕೆ ಧನ್ಯವಾದಗಳನ್ನು ತಿಳಿಸುತ್ತ, ನೆನಪಿನ ರಸದೌತಣದ‌ ಸವಿಹೆಚ್ಚಿಸಿದ ಕೆಳೆಯರಿಗೆ ವಂದಿಸುತ ಈ ಕವಿತೆಯನ್ನು ನಿವೇದಿಸುತ್ತಿರುವೆ. ಓದಿ ಆನಂದಿಸಿ...

"ಈತನೀಗ ವಾಸುದೇವನು" ಹಾಡು ನೆನಪಾಯ್ತು... "ಗೀತ ಈಗ ವಾಸುದೇವನು" ಅಂತ ಮೂಡಿತು☺️🙏

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...