ಹಿಂತಿರುಗಿ ನೋಡಿದಾಗ
ಬದುಕಿನಂಗಳದಲಿ ಬಂದು ಹೋಗಿಹ ಚಿತ್ರಗಳಿಗೆ ಸಿಗದು ಎಣಿಕೆ
ನೆನಪಿನಂಗಳದಿ ಮಿನುಗಿ ಬೆಳಗುತಿಹ ತಾರೆಗಳೆನೆ ಅವು ಬೆರಳೆಣಿಕೆ!
ರಮ್ಯೋದ್ಯಾನದಿ ನಳನಳಿಸಿದ ಬಣ್ಣಬಣ್ಣದ ಹೂಗಳು ಹಲವು!
ಹೃದಯಾಂತರಾಳದಿ ಅರಳಿ, ಘಮಘಮಿಸಿ ತಣಿಸಿದವು ಮಾತ್ರ ಕೆಲವು
ದೃಷ್ಟಿಗೆ ತೋರಿ ಹೃನ್ಮನ ಕಾಡಿದ ಸೃಷ್ಟಿಯ ಸಿರಿಯದು ಎನಿತೆನಿತೊ
ಹೃನ್ಮನ ತಣಿಸಿ ಕವಿಮನ ತೆರೆಸಿದ ಅನುಪಮ ಸಿರಿಗೆ ಮಿತಿ ಇನಿತೊ!
(ಬಾಕಿ ಇದೆ)
ರಚನೆ: ಸಂತ (ಸ.ಗು ಸಂತೋಷ್)
ತಾರೀಖು: ೧೮/೧೦/೨೦೨೩
No comments:
Post a Comment