ಮಿತ್ರಾರಾಮ!
ದಿಢೀರನೆ ತಿಳಿಸಿ, ದಿಢೀರನೆ ಹೊರಟು
ಅಚ್ಚರಿ ಹುಟ್ಟಿಸಿ, ತಲೆಬಿಸಿ ಹೆಚ್ಚಿಸಿ
ನಾಚಿಕೆ ದೂಡುತ, ನಲವಲಿ ಬೀಗುತ
ಸೇರುವ ನೆಲೆಯೆ ಮಿತ್ರಾರಾಮ!
ಅಧೀರನಾಗದೆ, ಸುಧೀರನೊಡನೆ
ನಿತ್ಯಾದರದ ರಕ್ಷಾಭಯದಿ,
ಅನ್ವಿತಾಶ್ರಯದಿ, ಅನೀಶ ಸುಖದಿ
ಸೇರುವ ನೆಲೆಯೆ ಮಿತ್ರಾರಾಮ!
ಇಂದಿನ ಚಿಂತೆಯ, ಕಂತೆಯ ಒಗೆದು
ಅಂದಿನ ಅಂದದ ಸೊಗಸಲಿ ಮಿಂದು
ಮುಂದಿನ ಪಯಣಕೆ ಕಸುವದು ಬೇಕೆನೆ
ಸೇರುವ ನೆಲೆಯೆ ಮಿತ್ರಾರಾಮ!
ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೧೪/೦೫/೨೦೨೫
ಪ್ರೇರಣೆ: ನನಗೆ ಅತ್ಯಂತ ಆತ್ಮೀಯ ಗೆಳೆಯ ಸುಧೀರ್ ಸೋಂದೂರ್... ಅವರ ಅಮೆರಿಕಾದ ಮನೆಗೆ ನೀಡುತ್ತಿಹ ಇಂದಿನ ದಿಢೀರ್ ಭೇಟಿ ...
ಜೊತೆಯಲ್ಲಿ ನನ್ನ ದಿಢೀರ್ ನಿರ್ಧಾರಗಳಿಂದ ಮಡದಿ ಶ್ರುತಿ ಮತ್ತು ಮಗಳು ಸೃಷ್ಟಿಯನ್ನು ಕರೆದುಕೊಂಡು ಹೋಗಲಾಗುತ್ತಿಲ್ಲ...
ಇಬ್ಬರ ಕುಟುಂಬಗಳ ಸಮ್ಮಿಲನದ ಸದಾವಕಾಶ ಕೈತಪ್ಪಿಸಿದ ಬೇಸರವಿದೆ.
ಆದರೆ ನನ್ನೆಲ್ಲಾ ಅವಾಂತರವನ್ನು ಮನ್ನಿಸಿ ಬಹಳ ಆದರದಿಂದ ಮನೆಗೆ ಬರಮಾಡಿಕೊಳ್ಳುತ್ತಿರುವ ಗೆಳೆಯ ಹಾಗೂ ಅವರ ಕುಟುಂಬಕ್ಕೆ ನಾನು ಸದಾ ಆಭಾರಿ.
ಸೋದರಿ ರಕ್ಷಾ, ಪುಟಾಣಿಗಳು ಅನ್ವಿತಾ ಹಾಗೂ ಅನೀಶಗೆ ವಿಶೇಷ ವಂದನೆಗಳು, ಶುಭ ಹಾರೈಕೆಗಳು🙏

No comments:
Post a Comment