ಬತ್ತಿದ ಆ ಒರತೆ!
ಮುಕ್ತಿಧಾಮಕೆ ತೆರಳಿದ ಒಡನೆ ನಾಡಿನ ಹೆಮ್ಮೆಯ ಚೇತನ!!
ಜ್ಯೇಷ್ಠ ಮಾಸದ ಚೌತಿಯ ದಿನದಿ, ದಿವ್ಯ ಸೃಷ್ಟಿಯ ರೋಧನ!
ಅಂಬರ ನೊಂದು, ಕಂಬನಿಗರೆದು, ಮೊರೆದು ಗೋಳಾಡುತಿದೆ
ಭೂರಮೆ ನೆನೆದು, ನೆಲ-ಮಲೆ ಕುಸಿದು, ಜೀವ ಹೋಳಾಗುತಿದೆ!
ಕಾವ್ಯ ಕುಸುಮಕೆ ಕೂಡದೆ ಕಂಪು, ಉಸಿರು ಬಿಗಿದಾಗುತಿದೆ
ಭಾವದೊರತೆಗೆ ಕಾಣದೆ ಹರಿವು, ಮೌನವೆ ಮಾತಾಗುತಿದೆ
ಮೂಕ ವೇದನೆ ತಾಳದ ಪ್ರೀತಿ, ಕವಿಯ ಹಾಡಾಗುತಿದೆ
ಗಾನಾಮೃತದಿ ಅಂತಿಮ ನಮನ, ಜಗದ ಧ್ವನಿಯಾಗುತಿದೆ
ಭಕ್ತಿ ಪರಾಗ, ರಾಗ-ವಿರಾಗ, ಎಲ್ಲಾ ರಸವಾಗುತಿದೆ
ಯುಕ್ತ ವಿಚಾರ, ಮುಕ್ತಾಚಾರ
ಜೀವ ಹಗುರಾಗುತಿದೆ!
ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೩೧/೦೫/೨೦೨೫
ಪ್ರೇರಣೆ: ಹೆಚ್.ಎಸ್.ವಿ ಅವರ ಅಂತಿಮ ಯಾತ್ರೆಯ ಸಂದರ್ಭ

No comments:
Post a Comment